ವಿಂಡೋಸ್ ಮತ್ತು ಮ್ಯಾಕ್ ಗೆ ವಾಟ್ಸ್ ಆಪ್ ಡೆಸ್ಕ್ ಟಾಪ್ ಆಪ್ ಬಿಡುಗಡೆ ಮಾಡಿದ ಫೇಸ್ಬುಕ್ ಸಾಮಾಜಿಕ ಅಂತರ್ಜಾಲ ದೈತ್ಯ ಫೇಸ್ಬುಕ್ ಈಗ ಸಂದೇಶ ವಿನಿಮಯ ಆಪ್ ವಾಟ್ಸ್ ಆಪ್ ಅನ್ನು ವಿಂಡೋಸ್ ಮತ್ತು ಮ್ಯಾಕ್ ಕಂಪ್ಯೂಟರ್ ಗಳಿಗೆ ಆಪ್ ರೂಪದಲ್ಲಿ ಬಿಡುಗಡೆ ಮಾಡಿದೆ ಎಂದು ಮಾಧ್ಯಮಗಳು ನ್ಯೂಯಾರ್ಕ್: ಸಾಮಾಜಿಕ ಅಂತರ್ಜಾಲ ದೈತ್ಯ ಫೇಸ್ಬುಕ್ ಈಗ ಸಂದೇಶ ವಿನಿಮಯ ಆಪ್ ವಾಟ್ಸ್ ಆಪ್ ಅನ್ನು ವಿಂಡೋಸ್ ಮತ್ತು ಮ್ಯಾಕ್ ಕಂಪ್ಯೂಟರ್ ಗಳಿಗೆ ಆಪ್ ರೂಪದಲ್ಲಿ ಬಿಡುಗಡೆ ಮಾಡಿದೆ ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ. "ಈ ಡೆಸ್ಕ್ ಟಾಪ್ ಆಪ್, ನಿಮ್ಮ ಮೊಬೈಲ್ ನ ಆಪ್ ನ ಪ್ರತಿರೂಪವಾಗಿದ್ದು, ಎರಡು ಕಡೆಯಿಂದ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಸುತ್ತದೆ" ಎಂದು ವಾಟ್ಸ್ ಆಪ್ ಸಂಸ್ಥೆ ತಿಳಿಸಿರುವುದಾಗಿ ಸಿ ಎನ್ ಎನ್ ವರದಿ ಮಾಡಿದೆ. ಇದು ಬ್ರೌಸರ್ ನಲ್ಲಿ ಬಳಸಬಹುದಾದ ವಾಟ್ಸ್ ಆಪ್ ಗಿಂತಲೂ ವಿಭಿನ್ನವಾಗಿದ್ದು, ಹೆಚ್ಚಿನ ಸೌಲಭ್ಯಗಳು ಸಿಗಲಿವೆ ಎಂದು ವಾಟ್ಸ್ ಆಪ್ ತಿಳಿಸಿದೆ. ವಿಂಡೋಸ್ ೮ ಮತ್ತು ಮ್ಯಾಕ್ ಒ ಎಸ ೧೦.೯ ನಂತರದ ಕಂಪ್ಯೂಟರ್ ಗಳಲ್ಲಿ ವಾಟ್ಸ್ ಆಪ್ ಆಪ್ ಲಭ್ಯವಿದ್ದು, ನಿಮ್ಮ ಫೋನ್ ನ ವಾಟ್ಸ್ ಆಪ್ ಜೊತೆಗೆ ಸಿಂಕ್ ಮಾಡಿಕೊಳ್ಳಬಹುದಾಗಿದೆ.