6.6 ಕೋಟಿ ವರ್ಷ ಹಳೆಯ ಡೈನೋಸಾರ್ ಭ್ರೂಣ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆ ಇಷ್ಟೊಂದು ಸುಸ್ಥಿತಿಯಲ್ಲಿರುವ ಡೈನೊಸಾರ್ ಭ್ರೂಣ ಪತ್ತೆಯಾಗಿರುವುದು ಜಗತ್ತಿನಲ್ಲಿ ಇದೇ ಮೊದಲನೆಯದು. ವಾಷಿಂಗ್ಟನ್: ಅಮೆರಿಕ ಸಂಶೋಧಕರು ತಾವು ಸಂರಕ್ಷಿತ ಸ್ಥಿತಿಯಲ್ಲಿರುವ ಡೈನೋಸಾರ್() ಭ್ರೂಣವನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಚ್ಚರಿಯ ವಿದ್ಯಮಾನ: ಇಂಗ್ಲೆಂಡ್ ಆಗಸದಲ್ಲಿ ಕಂಡುಬಂದ ಬಿಳಿ ಬಣ್ಣದ ಕಾಮನಬಿಲ್ಲು6.6 ಕೋಟಿ ವರ್ಷಗಳ ಹಿಂದೆ ಹಕ್ಕಿ ಪ್ರಭೇದಕ್ಕೆ ಸೇರಿದ ಡೈನೋಸಾರ್ ಮೊಟ್ಟೆ ಇದಾಗಿದೆ. ದಕ್ಷಿಣ ಚೀನಾದ ಗಾಂಜೊ ಪ್ರಾಂತ್ಯದಲ್ಲಿ ಈ ಪಳೆಯುಳಿಕೆ ಸಂಶೋಧಕರಿಗೆ ಲಭ್ಯವಾಗಿದೆ. ಇದನ್ನೂ ಓದಿ: ಶಾರ್ಕ್ ಪ್ರತಿಕಾಯಗಳಲ್ಲಿನ ಪ್ರೋಟೀನ್ ನಲ್ಲಿ ಕೊರೊನಾಗೆ ತಡೆಯೊಡ್ಡುವ ಸಾಮರ್ಥ್ಯ!ಇದುವರೆಗೂ ಸಿಕ್ಕ ಪಳೆಯುಳಿಕೆಗಳು ಕಾಲನ ಹೊಡೆತಕ್ಕೆ ಸಿಕ್ಕೋ, ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿಯೋ ಘಾಸಿಗೊಂಡಿತ್ತು. ಇಷ್ಟೊಂದು ಸುಸ್ಥಿತಿಯಲ್ಲಿರುವ ಡೈನೊಸಾರ್ ಭ್ರೂಣ ಪತ್ತೆಯಾಗಿರುವುದು ಜಗತ್ತಿನಲ್ಲಿ ಇದೇ ಮೊದಲನೆಯದು ಎನ್ನಲಾಗಿದೆ. ಭ್ರೂಣದ ಅಳತೆ ಅಡಿಯಿಂದ ಮುಡಿಯವರೆಗೆ 27 ಸೆ.ಮೀ ಇದೆ.ಇದನ್ನೂ ಓದಿ: ಕಾಲೆತ್ತಿ ನಾಟ್ಯವಾಡುವ ಕೊಟ್ಟಿಗೆಹಾರ ಕಪ್ಪೆಗೂ, ವಿದೇಶಿ ಬಾರ್ನಿಯಾ ಕಪ್ಪೆ ನಡುವಿನ ವ್ಯತ್ಯಾಸ: ಅಧ್ಯಯನದಿಂದ ಬಹಿರಂಗ