ಫೋನ್ ಗೊಂದು ಗ್ರಂಥಾಲಯ ಕೈಗೊಂದು ಥಿಯೇಟರ್! ಸ್ಮಾರ್ಟ್ಫೋನ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಂಚಾರಿ ಗ್ರಂಥಾಲಯ ಹೊಂದಬಹುದು, ಅದು ಉಚಿತವಾಗಿಯೂ ಸಾಧ್ಯವಿದೆ! ಹೌದು. ತಲೆಗೆ ಸ್ವಲ್ಪ ಕೆಲಸ ಕೊಟ್ಟರೆ ನಿಮ್ಮ ಸ್ಮಾರ್ಟ್ಪೋನ್ನನ್ನೇ ಸಂಚಾರಿ ಗ್ರಂಥಾಲಯ ಮಾಡಿಕೊಳ್ಳಬಹುದು. ಆ್ಯಂಡ್ರಾಯ್ಡ್ನ ಗೂಗಲ್ ಪ್ಲೇ ಸೇರಿದಂತೆ ಬಹುತೇಕ ಆಪರೇಟಿಂಗ್ ಸಿಸ್ಟಮ್ಗಳು ಈಗ 'ಶಾಪ್ ಬುಕ್ಸ್' ಸೌಲಭ್ಯ ನೀಡುತ್ತಿವೆ. ಇಂಗ್ಲಿಷ್ನ ಖ್ಯಾತ ಪುಸ್ತಕಗಳು 'ಶಾಪ್ ಬುಕ್ಸ್'ನಲ್ಲಿ ಲಭ್ಯವಿರುತ್ತವೆ. ಸುಮಾರು 100 ಪುಸ್ತಕಗಳು ಉಚಿತವಾಗಿಯ ಲಭ್ಯವಿವೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ದೊರೆಯುವ ಎಲ್ಲ ಪುಸ್ತಕಗಳ ಬೆಲೆ ಮಾರುಕಟ್ಟೆ ಬೆಲೆಗಿಂತ ಶೇ.40ಕ್ಕೂ ಕಡಿಮೆಯಿದೆ. ಮಾರುಕಟ್ಟೆಗೆ ಹೋಗಿ ದುಪ್ಪಟ್ಟು ಹಣ ನೀಡಿ ಓದುವ ಬದಲು, ಅಲ್ಪ ಮೊತ್ತ ನೀಡಿ ನಿಮ್ಮ ಮೊಬೈಲ್ ಅನ್ನೇ ಗ್ರಂಥಾಲಯ ಮಾಡಿಕೊಳ್ಳಬಹುದು. ಇದಲ್ಲದೆ, ಪ್ರತಿಯೊಬ್ಬ ಬಳಕೆದಾರನಿಗೂ ಮತ್ತೊಂದು ವಿಶೇಷ ಅವಕಾಶ ನೀಡಲಾಗಿದ್ದು, 50 ಎಂಬಿಗೂ ಕಡಿಮೆ ಇರುವ ಫೈಲ್ಗಳನ್ನು ನಿಮ್ಮ 'ಮೈ ಬುಕ್'ಗೆ ಸೇರಿಸಿಕೊಳ್ಳಬಹುದು. ಕಂಪ್ಯೂಟರ್ನಲ್ಲಿ ಯಾವುದಾದರೂ ಪುಸ್ತಕ ಅಥವಾ ದಾಖಲೆಗಳು ಇದ್ದರೇ ಅದನ್ನು ನಿಮ್ಮ ಫೋನ್ ಅಂದರೆ ಗೂಗಲ್ ಪ್ಲೇ ಅಕೌಂಟ್ಗೆ ಅಪ್ಲೋಡ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇನ್ನು ಬಾಲಿವುಡ್ ಹಾಗೂ ಹಾಲಿವುಡ್ನ ಖ್ಯಾತ ಚಿತ್ರಗಳು ಕೂಡ ಇನ್ನು ಆ್ಯಂಡ್ರಾಯ್ಡ್ನಲ್ಲಿ ಲಭ್ಯವಿದೆ. ಸದ್ಯದ ಮಟ್ಟಿಗೆ ಸುಮಾರು 150 ಚಿತ್ರಗಳು ಮೂವಿ ಶಾಪ್ನಲ್ಲಿವೆ. ಈಗಾಗಲೇ ಯೂಟ್ಯೂಬ್ನಲ್ಲಿನ ಎಲ್ಲ ಚಿತ್ರಗಳನ್ನು ಹಂತಹಂತವಾಗಿ ಮೂವಿ ಶಾಪ್ಗೂ ವರ್ಗಾಯಿಸುವ ಕೆಲಸಕ್ಕೆ ಗೂಗಲ್ ಮುಂದಾಗಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಥಿಯೇಟರ್ ಹೋದಾಗ ಚಿತ್ರ ಬೇಜಾರು ಬರಿಸಿದರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಮತ್ತೊಂದು ಚಿತ್ರ ನೋಡಬಹುದು!