ಫೇಸ್ ಬುಕ್ ಮೆಸೆಂಜರ್ ಡೌನ್ಲೋಡ್ ಮಾಡಿದ ಒಂದು ಬಿಲಿಯನ್ ಬಳಕೆದಾರರು ಫೇಸ್ ಬುಕ್ ಮೆಸೆಂಜರನ್ನು (ಅಂತರ್ಜಾಲದಲ್ಲಿ ಸಂದೇಶ ಹಂಚಿಕೊಳ್ಳುವ ಆಪ್) ಆಂಡ್ರಾಯ್ಡ್ ಫೋನುಗಳು ಮತ್ತು ಟ್ಯಾಬ್ಲೆಟ್ ಗಳಿಗೆ ಒಂದು ಬಿಲಿಯನ್ ಬಾರಿ ನವದೆಹಲಿ: ಫೇಸ್ ಬುಕ್ ಮೆಸೆಂಜರನ್ನು (ಅಂತರ್ಜಾಲದಲ್ಲಿ ಸಂದೇಶ ಹಂಚಿಕೊಳ್ಳುವ ಆಪ್) ಆಂಡ್ರಾಯ್ಡ್ ಫೋನುಗಳು ಮತ್ತು ಟ್ಯಾಬ್ಲೆಟ್ ಗಳಿಗೆ ಒಂದು ಬಿಲಿಯನ್ ಬಾರಿ ಇಳಿಸಿಕೊಳ್ಳಲಾಗಿದೆ ಎಂದು ಫೇಸ್ ಬುಕ್ ನ ಸಂದೇಶಾಧಾರಿ ಸೇವೆಗಳ ಉಪಾಧ್ಯಕ್ಷ ಡೇವಿಡ್ ಮಾರ್ಕಸ್ ತಿಳಿಸಿದ್ದಾರೆ. ಆದುದರಿಂದ ಈಗ ಈ ಮೆಸಂಜರ್ ಒಂದು ಬಿಲಿಯನ್ ಗಿಂತಲೂ ಹೆಚ್ಚು ಬಾರಿ ಡೌನ್ಲೋಡ್ ಆಗಿರುವ ವಾಟ್ಸ್ ಆಪ್, ಜಿಮೇಲ್, ಯುಟ್ಯೂಬ್, ಸರ್ಚ್ ಮತ್ತು ಮ್ಯಾಪುಗಳ (ಭೂಪಟ) ಬಳಗಕ್ಕೆ ಸೇರಿಕೊಂಡಿದೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ. ಸಂದೇಶ ಹಂಚಿಕೊಳ್ಳುವುದು, ವಿಡಿಯೋ ಕಾಲ್, ಧ್ವನಿ ಕ್ಲಿಪ್ಗಳು ಹಂಚಿಕೊಳ್ಳುವುದು ಇತ್ಯಾದಿ ಸೌಕರ್ಯಗಳುಳ್ಳ ಈ ಆಪ್ ಇತ್ತೀಚೆಗೆ ಭಾರಿ ಜನಪ್ರಿಯತೆ ಪಡೆದಿದೆ. ವಾಟ್ಸ್ ಆಪ್ ಕೂಡ ತನ್ನ ಒಡೆತನದಲ್ಲೇ ಇರುವುದರಿಂದ ಮೆಸೇಜಿಂಗ್ ಕ್ಷೇತ್ರದಲ್ಲಿ ಫೇಸ್ಬುಕ್ ಈಗ ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ. ಫೇಸ್ ಬುಕ್ ಮೀರಿಸುವ ಮುಂದಿನ ಅಂತರ್ಜಾಲ ಆಪ್ ಯಾವುದು ಎಂದು ಜನರು ಒಂದು ವರ್ಷದಿಂದ ಕೇಳುತ್ತಿದ್ದ ಪ್ರಶ್ನೆಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಉತ್ತರಿಸಿದೆ.