ಪಾಸ್‌ವರ್ಡ್ ಬದಲಿಸಿದ್ದೀರಾ? (ಹ್ಯಾಕ್ ಆದೀತು ಅಕೌಂಟ್) ಪಾಸ್‌ವರ್ಡ್ ಪಾಸ್‌ವರ್ಡೇ ಆದರೆ ಪಾಸ್‌ವರ್ಡ್ ಹೇಗಾದೀತು? ಹ್ಯಾಕರ್‌ಗಳ ಪಾಲಿಗೆ ಲಕ್ಕಿ ಹಾಗೂ ಬಳಕೆದಾರರ ದಡ್ಡತನದ ಪಾಸ್‌ವರ್ಡ್ ಯಾವುದೆಂದರೆ 'ಪಾಸ್‌ವರ್ಡ್()'. ಹೌದು. ಹ್ಯಾಕರ್‌ಗಳ ಕೈಚಳಕಕ್ಕೊಳಗಾದ ಎಲ್ಲ ಆನ್‌ಲೈನ್ ಅಕೌಂಟ್‌ಗಳ ಸಮೀಕ್ಷೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಹ್ಯಾಕ್ ಆದ ಅಕೌಂಟ್‌ಗಳಲ್ಲಿ ಹೆಚ್ಚಿನ ಬಳಕೆದಾರರು ತಮ್ಮ ಪಾಸ್‌ವರ್ಡ್‌ನ್ನು 'ಪಾಸ್‌ವರ್ಡ್‌' ಎಂದೇ ಉಳಿಸಿಕೊಂಡಿದ್ದಾರೆ. ಈ ಕಾರಣದಿಂದ ಸ್ಪ್ಲ್ಯಾಶ್‌ಡಾಟಾ ಎಂಬ ಅಂತರಾಷ್ಟ್ರೀಯ ಸಂಸ್ಥೆಯು ಸುಲಭವಾಗಿ ಹ್ಯಾಕ್ ಆಗಬಹುದಾದ 25 ಪಾಸ್‌ವರ್ಡ್‌ಗಳ ಪಟ್ಟಿ ನೀಡಿದೆ. ಈ ಪಟ್ಟಿಯಲ್ಲಿನ ಪಾಸ್‌ವರ್ಡ್ ನಿಮ್ಮದಾಗಿದ್ದರೆ ಇಂದೇ ಬದಲಿಸಿ. , 123456, 12345678, abc123, , , , , 111111, , , trustno1, 1234567, , , 123123, , , , , , , , , password1