ದೇಶದ ಐಟಿ ಕಂಪನಿಗಳಿಗೂ ಬದಲಾವಣೆ ಗಾಳಿ ದಶಕಗಳ ಕಾಲ ಸರ್ವರ್ ನಿರ್ವಹಣೆಯಂತಹ ಕಡಿಮೆ ಮಿತಿಯ ಕೆಲಸದಲ್ಲೇ ಗಮನ ನೆಟ್ಟಿದ್ದ ಐಟಿ ಕಂಪನಿಗಳು ಈಗ ಬದಲಾವಣೆಯನ್ನು ಎದುರು ನೋಡುತ್ತಿವೆ... ಮುಂಬೈ: ದಶಕಗಳ ಕಾಲ ಸರ್ವರ್ ನಿರ್ವಹಣೆಯಂತಹ ಕಡಿಮೆ ಮಿತಿಯ ಕೆಲಸದಲ್ಲೇ ಗಮನ ನೆಟ್ಟಿದ್ದ ಐಟಿ ಕಂಪನಿಗಳು ಈಗ ಬದಲಾವಣೆಯನ್ನು ಎದುರು ನೋಡುತ್ತಿವೆ. ಆನ್‍ಲೈನ್ ಸಂಶೋಧನೆಗಳು ಗ್ರಾಹಕರ ಅಗತ್ಯತೆಗಳನ್ನೂ ಬದಲಾಯಿಸುತ್ತಿರುವ ಕಾರಣ, ಚಾಲಕರಹಿತ ಕಾರುಗಳು ಸೇರಿದಂತೆ ಸುಧಾರಿತ ಯೋಜನೆಗಳತ್ತ ಕಂಪನಿಗಳು ಮುಖ ಮಾಡಿವೆ. ಟಿಸಿಎಸ್‍ನಿಂದ ಹಿಡಿದು ವಿಪ್ರೋವರೆಗೆ ಎಲ್ಲ ಐಟಿ ಕಂಪನಿಗಳೂ ಇನ್ಫೋಫಿಸ್ ಮಾದರಿಯಲ್ಲೇ ಸಾಗುತ್ತಿದ್ದು, ಹೊಸ, ಹೈಎಂಡ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಮುಂದಾಗಿವೆ. ಇತ್ತೀಚೆಗಷ್ಟೇ ಇನ್ಫೋಸಿಸ್ ಅಮೆರಿಕದ ಪನಾಯಾ ಕಂಪನಿಯನ್ನು ರು. 1,245 ಕೋಟಿಗೆ ಖರೀದಿಸಿತ್ತು. ಮಾನವನ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅನುಕರಣೆ ಮಾಡುವಂತಹ ಕಂಪ್ಯೂಟಿಂಗ್ ಸಿಸ್ಟಂ ಅನ್ನು ವಿಪ್ರೋ ಅಭಿವೃದ್ಧಿಪಡಿಸುತ್ತಿದೆ. ಮಾನವನ ಮಾತನ್ನು ಅರ್ಥೈಸಿಕೊಂಡು ಯಂತ್ರಗಳೇ ಪ್ರತಿಕ್ರಿಯಿಸುವಂತಹ ವ್ಯವಸ್ಥೆಯಿದು. ಎಚ್‍ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯು ರೊಬೋಟ್‍ಬಳಸಿ ಹಾರ್ಡ್ವೇರ್ ಪರೀಕ್ಷೆ ನಡೆಸುವ ಯೋಜನೆ ಸಿದ್ಧಪಡಿಸುತ್ತಿದೆ.