ಗೂಗಲ್‌ನಿಂದ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ಡೂಡಲ್ 14ನೇ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ಬಗ್ಗೆ ಶನಿವಾರ ಗೂಗಲ್ ತಮ್ಮ ಡೂಡಲ್ಸ್ ರಚಿಸಿದೆ.... ನವದೆಹಲಿ: 14ನೇ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ ಬಗ್ಗೆ ಶನಿವಾರ ಗೂಗಲ್ ತಮ್ಮ ಡೂಡಲ್ ರಚಿಸಿದೆ. ಗೂಗಲ್ ಹೋಮ್ ಪೇಜ್ ನಲ್ಲಿ ಕಾಣಿಸುವ ಡೂಡಲ್‌ನಲ್ಲಿ ಅನಿಮೇಟೆಡ್ ಅಥ್ಲೀಟ್‌ಗಳು ಭಾರ ಎತ್ತುವುದು, ಈಜುವುದು ಹೀಗೆ ಆಟವಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ 2015 ಶನಿವಾರ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದಲ್ಲಿ ಆರಂಭವಾಗಿದ್ದು, ಅಗಸ್ಟ್ 2, 2015ರ ವರೆಗೆ ನಡೆಯಲಿದೆ. 177 ದೇಶದಿಂದ ಸುಮಾರು 6.500 ಅಥ್ಲೀಟ್‌ಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.