ವೊನೊಬೊ ಮಾರ್ಗದರ್ಶನ ದೇಶದ ರಸ್ತೆ ಪರಿಸ್ಥಿತಿ ದಿನ ಕಳೆದಂತೆ ದುಸ್ತರವಾಗುತ್ತಿದೆ. ಇದೇ ಕಾರಣದಿಂದ ರಸ್ತೆ ಹುಡುಕಲು ದಿನಕ್ಕೊಂದು ಹೊಸ ಅವತಾರದಲ್ಲಿ ಅಪ್ಲಿಕೇಷನ್ ಹಾಗೂ ವೆಬ್‌ಸೈಟ್‌ಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ವೊನೊಬೊ.ಕಾಮ್(.) ಹೊಸ ಸೇರ್ಪಡೆ. ಜಿನೆಸಿಸ್ ಇಂಟರ್‌ನ್ಯಾಷನಲ್ ಕಾರ್ಪೊರೇಷನ್ ರೂಪಿಸಿರುವ ಈ ವೆಬ್‌ಸೈಟ್‌ನಲ್ಲಿ ಹೊಸದಾಗಿ ರಸ್ತೆಯ ಚಿತ್ರಗಳು ಸಿಗಲಿವೆ. ಪ್ರತಿ 6 ತಿಂಗಳಿಗೊಮ್ಮೆ ಈ ಚಿತ್ರಗಳನ್ನು ಬದಲಿಸಲಾಗುತ್ತದೆ. ಇನ್ನು 3 ವಾರಗಳಲ್ಲಿ ಲೈವ್ ಟ್ರಾಫಿಕ್ ಮಾಹಿತಿಯೂ ಇದರಲ್ಲಿ ಲಭ್ಯವಿರಲಿದೆ. ಇದರ ಜತೆಗೆ ಸ್ಮಾರ್ಟ್ ಫೋನ್ ಮಾರುಕಟ್ಟೆಗೂ ಶೀಘ್ರವಾಗಿ ವೊನೊಬೊ.ಕಾಮ್ ಬರುತ್ತಿದೆ. ಇದರಿಂದ ಬೃಹತ್ ನಗರಗಳಲ್ಲಿ ವಿಳಾಸ ಹುಡುಕುವುದು ಸುಲಭವಾಗುತ್ತದೆ. ಪ್ರಸ್ತುತ ಬೆಂಗಳೂರು ಸೇರಿದಂತೆ12 ಮಹಾನಗರಗಳಲ್ಲಿ ದೊರಕುತ್ತಿದ್ದು ಮುಂದಿನ 6 ತಿಂಗಳಲ್ಲಿ 54 ನಗರಗಳ ಮಾಹಿತಿ ಇದರಲ್ಲಿ ಸಿಗಲಿದೆ. ಮತ್ತೊಂದು ವಿಶೇಷವೆಂದರೆ 360 ಡಿಗ್ರಿ ನೋಟವೂ ಚಿತ್ರದಲ್ಲಿ ಸಿಗಲಿದೆ.