ಸಚಿನ್ ನಂ.1! 2013ರಲ್ಲಿ ಟ್ವೀಟರ್ ಟ್ರೆಂಡಿಂಗ್‌ನಲ್ಲಿ ಮೋದಿ ಮತ್ತು ಸಚಿನ್ ಉನ್ನತ ಸ್ಥಾನದಲ್ಲಿದ್ದಾರೆ! ನಿವೃತ್ತಿ ಸಂದರ್ಭದಲ್ಲಿ ಸಚಿನ್ ಮಾಡಿದ ಟ್ವೀಟ್ 2013ರಲ್ಲಿ ಅತಿಹೆಚ್ಚು ಬಾರಿ ರೀಟ್ವೀಟ್‌ಗೊಂಡ ಟ್ವೀಟ್ ಎಂಬ ಹೆಗ್ಗಳಿಕೆ ಗಳಿಸಿದೆ. ತೆಂಡೂಲ್ಕರ್ ಅಲ್ಲೂ ನಂ.1! ಇನ್ನು ರಾಜಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಬಳಕೆಯಾದ ಹೆಸರು ಮೋದಿ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದ್ದಾರೆ. 3ನೇ ಸ್ಥಾನದಲ್ಲಿ ಬಿಜೆಪಿ, 4ನೇ ಸ್ಥಾನದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, 5ನೇ ಸ್ಥಾನದಲ್ಲಿ ದಿಲ್ಲಿ ವಾಂಟ್ಸ್ ಎಎಪಿ ವಿಷಯಗಳಿವೆ. ಸುದ್ದಿಯಲ್ಲಿ ಮೊದಲ ಸ್ಥಾನ ಅಫ್ಜಲ್ ಗುರುಗೆ ದಕ್ಕಿದ್ದರೆ, 2ನೇ ಸ್ಥಾನ ಸಿಕ್ಕಿದ್ದು ತೆಹಲ್ಕಾ ಸಂಪಾದಕರಾಗಿದ್ದ ತರುಣ್ ತೇಜ್‌ಪಾಲ್‌ಗೆ.