ಟಾಟಾ ಡೊಕೊಮೊ ಎಂ2ಎಂ ಸೇವೆ ಕಚೇರಿಯಲ್ಲಿದ್ದರೂ ನಿಮ್ಮ ಮೊಬೈಲ್‌ನಿಂದ ಮನೆಯಲ್ಲಿ ನಡೆಯುವ ಘಟನಾವಳಿಗಳ ವಿಡಿಯೋ ವೀಕ್ಷಿಸಬಹುದು. ಇದಕ್ಕೆ ನೀವು ಮಾಡಬೇಕಾದುದು ಎಂದರೆ ಮನೆಯಲ್ಲಿ ಸಣ್ಣ ವೈರ್‌ಲೆಸ್ ಕ್ಯಾಮೆರಾ ಅಳವಡಿಸುವುದು! ಆಶ್ಚರ್ಯವಾಗುತ್ತಿದೆ ಅಲ್ಲ? ಟೆಲಿ ಸರ್ವಿಸಸ್ ವಲಯದಲ್ಲಿ ದಾಪುಗಾಲಿಕ್ಕುತ್ತಿರುವ ಟಾಟಾ ಡೊಕೊಮೊ ಇಂತಹ ಅನೇಕ ಎಂ2ಎಂ (ಮಷಿನ್ ಟು ಮಷಿನ್) ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಸ್ಮಾರ್ಟ್ ಹೋಮ್ ಸಲ್ಯೂಷನ್ ಜನಪ್ರಿಯವಾದ ಬಳಿಕ, ಕಾರು ಹುಡುಕಾಟ, ಸ್ಕೂಲ್ ಬಸ್ ಟ್ರಾಕಿಂಗ್, ಸ್ಮಾರ್ಟ್ ಟಾಸ್ಕ್ ಮೊಬೈಲ್ ಅಪ್ಲಿಕೇಶನ್ ಸೇವೆಗಳನ್ನೂ ಪರಿಚಯಿಸಿದೆ.