ದಟ್ಸ್ ಗಂಗ್ನಮ್ ಗಂಗ್ನಮ್ ನೃತ್ಯವು 100 ಕೋಟಿಗೂ ಅಧಿಕ ನೋಡುಗರನ್ನು ಹುಚ್ಚೆದ್ದು ಕುಣಿಸಿದೆ. ಪ್ರಸಕ್ತ ಸಾಲಿನ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ಬಳಿಕ ಕ್ರಿಸ್ ಗೇಲ್ ಮಾಡಿದ 'ಗಂಗ್ನಮ್‌' ನೃತ್ಯದ ಬಳಿಕ ಯೂ ಟ್ಯೂಬ್‌ನಲ್ಲಿ ಗಂಗ್ನಮ್ ನೃತ್ಯ ಮತ್ತಷ್ಟು ಖ್ಯಾತಿಯಾಗಿತ್ತು. ಯೂಟ್ಯೂಬ್ ವ್ಯವಸ್ಥಾಪಕರು ನೀಡಿರುವ ಅಧಿಕೃತ ಹೇಳಿಕೆಯಂತೆ ಕಳೆದ ವಾರದ ಅಂಕಿಗಳ ಪ್ರಕಾರ ಯೂಟ್ಯೂಬ್ ಒಂದರಲ್ಲೇ 123 ಕೋಟಿ ಬಾರಿ ಈ ವಿಡಿಯೋ ವೀಕ್ಷಿಸಲ್ಪಟ್ಟಿದೆ. ಯೂಟ್ಯೂಬ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ವಿಡಿಯೋ 100 ಕೋಟಿ ವೀಕ್ಷಣೆಯ ಹಿಟ್ ಪಡೆದಿದೆ. ದಕ್ಷಿಣ ಕೊರಿಯಾದ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿರುವ ಪಾರ್ಕ್ ಜೆಸಾಂಗ್ 'ಗಂಗ್ನಮ್ ಸ್ಟೈಲ್‌' ಹಾಡಿನ ಮೂಲಕ ಯೂಟ್ಯೂಬ್ ಹೀರೋ ಆಗಿ ಪರಿಣಮಿಸಿದ್ದಾರೆ.