ಬೇರೆ ದಾರಿ ಇಲ್ಲದೆ ಕಂಟ್ರೋಲ್ ಆಲ್ಟ್ ಡಿಲೀಟ್! ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಯಾವುದೇ ವ್ಯಕ್ತಿಯ ಕಂಪ್ಯೂಟರ್ ಹ್ಯಾಂಗ್ ಆದರೆ ಮಾಡುವ ಮೊದಲ ಕೆಲಸ ಕಂಟ್ರೋಲ್ ಆಲ್ಟ್ ಡಿಲೀಟ್. ಆದರೆ ಇದೊಂದು ಪ್ರಮಾದದಲ್ಲಿ ಹುಟ್ಟಿಕೊಂಡಿರುವ ಶಾರ್ಟ್‌ಕಟ್! ಹೌದು. ಈ ವಿಚಾರವನ್ನು ಸ್ವತಃ ಮೈಕ್ರೋಸಾಫ್ಟ್ ದಿಗ್ಗಜ ಬಿಲ್‌ಗೇಟ್ಸ್ ಒಪ್ಪಿಕೊಂಡಿದ್ದಾರೆ. ಕಂಪ್ಯೂಟರ್ ಅನ್ನು ಮತ್ತೆ ಲಾಗಿಂಗ್ ಇನ್ ಮಾಡಲು ಇರುವ ಈ ಶಾರ್ಟ್‌ಕಟ್‌ಗೆ ಒಂದೇ ಬಟನ್ ಕೊಡಲು ಮೈಕ್ರೋಸಾಫ್ಟ್ ಚಿಂತಿಸಿತ್ತಂತೆ. ಆದರೆ ಐಬಿಎಂ ಮಾದರಿಯ ಕೀಬೋರ್ಡ್ ಅನ್ನು ರೂಪಿಸಲು ವಿಂಡೋಸ್ ಜನಕರು ಮುಂದಾಗಿದ್ದರಿಂದ ಕಂಟ್ರೋಲ್ ಆಲ್ಟ್ ಡಿಲೀಟ್ ಹಾಗೆಯೇ ಉಳಿದುಕೊಂಡಿದೆ. ಆದರೆ ವಿಂಡೋಸ್‌ನ ಮುಂದಿನ ಓಎಸ್‌ಗಳಲ್ಲಿ ಒಂದೇ ಬಟನ್ ನೀಡುವ ಬಗ್ಗೆ ಬಿಲ್ ಗೇಟ್ಸ್ ಯಾವುದೇ ಮಾಹಿತಿ ನೀಡಿಲ್ಲ.