ಸೆಲ್‌ಕಾನ್ ಸಿರೀಸ್‌ಗೆ ಸ್ವಾಗತ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಂಬೆಗಾಲಿಡುತ್ತಿರುವ ಸೆಲ್‌ಕಾನ್ ಮೊಬೈಲ್ ಸಂಸ್ಥೆಯಪ ಸಿ ಮಾದರಿಯ ಸಿ40 ಜತೆಗೆ ಸಿ6ಐ, ಸಿ58, ಸಿ280 ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಂಸ್ಥೆ ಕೈಗೆಟಕುವ ದರದಲ್ಲಿ ಸಾಮಾನ್ಯ ಜನರಿಗೂ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳನ್ನು ಪರಿಚಯಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಇದೀಗ ಸೆಲ್‌ಕಾನ್ ಬಿಡುಗಡೆ ಮಾಡಿರುವ ನಾಲ್ಕು ಮಾದರಿಯ ನೂತನ ಮೊಬೈಲ್‌ಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಸಿ40ಯಲ್ಲಿ 4 ಇಂಚಿನ ಪರದೆಯ ಟಚ್‌ಸ್ಕ್ರೀನ್ ನೀಡಲಾಗಿದ್ದು, 1.3 ಎಂ.ಪಿ ಕ್ಯಾಮೆರಾ, ಬ್ಲ್ಯೂಟೂಥ್, ಜಿಪಿಆರ್‌ಎಸ್/ಎಂಎಂಎಸ್ ಸೌಲಭ್ಯ ನೀಡಲಾಗಿದೆ. ವಿಶೇಷವೆಂದರೆ ಪ್ರಿ ಡೌನ್‌ಲೋಡ್ ಅಪ್ಲಿಕೇಶನ್‌ಗಳು ಆಟೋ ಕಾಲ್ ರೆಕಾರ್ಡ್ ಹಾಗೂ ಮಲ್ಟಿ ಲಾಂಗ್ವೇಜ್ ಫೀಚರ್‌ಗಳನ್ನು ಪಡೆದುಕೊಳ್ಳಬಹುದು. ಸಿ6ಐ ಫೋನ್‌ನಲ್ಲಿ ಡ್ಯುಯಲ್ ಸಿಮ್ ಅವಕಾಶ ನೀಡಲಾಗಿದ್ದು, 2.4 ಇಂಚಿನ ಪರದೆ, 1.3 ಎಂ.ಪಿ ಕ್ಯಾಮೆರಾ, ವಿಡಿಯೋ ಹಾಗೂ ಆಡಿಯೋ ಪ್ಲೇಯರ್, ಬ್ಲೂಟೂಥ್, 1000 ಎಂಎಎಚ್ ಬ್ಯಾಟರಿ, 8 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ, ಟಾರ್ಚ್, ಆಟೋ ಕಾಲ್ ರೆಕಾರ್ಡ್ ಹಾಗೂ 3.5 ಎಂಎಂ ಆಡಿಯೋ ಜ್ಯಾಕ್ ಪಡೆದಿದೆ. ಸಿ58 ಡ್ಯುಯಲ್ ಸಿಮ್ ಫೋನ್‌ನಲ್ಲಿ 2.4 ಇಂಚಿನ ಸ್ಕ್ರೀನ್, 1.3 ಎಂ.ಪಿ ಕ್ಯಾಮೆರಾ, ವ್ಯಾಪ್ ಜಿಪಿಆರ್‌ಎಸ್, ಆಡಿಯೊ, ವೀಡಿಯೋ ಪ್ಲೇಯರ್, ಕೆ ಕ್ಲಾಸ್ ಸ್ಪೀಕರ್, ಎಫ್‌ಎಂ ರೇಡಿಯೋ, ಬ್ಲ್ಯೂಟೂಥ್, ಆಟೋಕಾಲ್, 2000 ಎಂಎಎಚ್ ಬ್ಯಾಟರಿ, 8 ಜಿಬಿಯವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಹೊಂದಿದೆ. ಸಿ280ನಲ್ಲಿ 2.4 ಇಂಚಿನ ಡಿಸ್ಪ್ಲೇ, 1.3 ಎಂಪಿ ಕ್ಯಾಮೆರಾ, ಆಡಿಯೋ, ವಿಡಿಯೋ ಪ್ಲೇಯರ್, ಎಫ್‌ಎಂ ರೇಡಿಯೋ, 1200 ಎಂಎಚ್ ಬ್ಯಾಟರಿ, 8 ಜಿಬಿಯವರೆಗೆ ವಿಸ್ತರಿಸಬಹುದಾದ ಮೆಮೊರಿ, ವ್ಯಾಪ್/ ಜಿಪಿಆರ್‌ಎಸ್, 3.5 ಎಂಎಂ ಆಡಿಯೋ ಜ್ಯಾಕ್ ಹೊಂದಿದೆ.