ಫೇಸ್‌ಬುಕ್ ಡೌನ್ ಆಗಲು ಹ್ಯಾಕರ್ ಕಾರಣ? ಮಂಗಳವಾರ ಬೆಳಗ್ಗೆ 11.30 ಹೊತ್ತಿಗೆ ಫೇಸ್‌ಬುಕ್ ಡೌನ್ ಆಗಿತ್ತು. ಇದಾದನಂತರ 40 ನಿಮಿಷಗಳಲ್ಲಿಯೇ ಎಲ್ಲವೂ ಸರಿಹೋಯ್ತು... ನವದೆಹೆಲಿ: ಮಂಗಳವಾರ ಬೆಳಗ್ಗೆ 11.30 ಹೊತ್ತಿಗೆ ಫೇಸ್‌ಬುಕ್ ಡೌನ್ ಆಗಿತ್ತು. ಇದಾದನಂತರ 40 ನಿಮಿಷಗಳಲ್ಲಿಯೇ ಎಲ್ಲವೂ ಸರಿಹೋಯ್ತು. ಫೇಸ್‌ಬುಕ್ ಮಾತ್ರವಲ್ಲ ಇನ್‌ಸ್ಟಾಗ್ರಾಂ ಕೂಡಾ ಕೆಲವು ನಿಮಿಷಗಳ ಕಾಲ ಸ್ತಬ್ಧವಾಗಿತ್ತು. ಹಾಗಾದರೆ ಫೇಸ್‌ಬುಕ್ ಡೌನ್ ಆಗಲು ಕಾರಣವೇನು? ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಫೇಸ್‌ಬುಕ್ ಕೆಲವು ಕಾಲ ಡೌನ್ ಆಗಿತ್ತು. ಫೇಸ್‌ಬುಕ್‌ನಲ್ಲಿ ಬದಲಾವಣೆಗಳನ್ನು ಮಾಡುವಾಗ ಕಾನ್ಫಿಗರೇಷನ್ ನಲ್ಲಿ ಪುಟ್ಟ ಸಮಸ್ಯೆ ಕಂಡು ಬಂದಿತ್ತು. ಅದನ್ನೀಗ ಫಿಕ್ಸ್ ಮಾಡಲಾಗಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಈಗ ಶೇ. 100 ಪರ್‌ಫೆಕ್ಟ್ ಆಗಿದೆ, ಬಳಕೆದಾರರು ಭಯಪಡಬೇಕಿಲ್ಲ ಎಂದು ಫೇಸ್‌ಬುಕ್ ಮೂಲಗಳು ಹೇಳಿವೆ. ಆದಾಗ್ಯೂ, ಹ್ಯಾಕಿಂಗ್ ಗ್ರೂಪ್ ಆದ ಲಿಜಾರ್ಡ್ ಸ್ಕ್ವಾಡ್, ನಾವು ಫೇಸ್‌ಬುಕ್ ಹ್ಯಾಕ್ ಮಾಡಿದ್ದರಿಂದ ಫೇಸ್‌ಬುಕ್ ಡೌನ್ ಆಗಿದ್ದು ಎಂದು ಹೇಳಿವೆ. ಮಾತ್ರವಲ್ಲದೆ ಮಲೇಷ್ಯಾ ಏರ್‌ಲೈನ್ಸ್‌ನ ಆಫೀಸಿನಿಂದ ನಾವು ಇಮೇಲ್‌ಗಳನ್ನು ಹ್ಯಾಕ್ ಮಾಡಿದ್ದು, ಶೀಘ್ರವೇ ಅವುಗಳನ್ನು ಬಿಡುಗಡೆ ಮಾಡಲಿವೆ ಎಂದು ಬೆದರಿಕೆಯನ್ನೊಡ್ಡಿವೆ. ಈ ವಾದವನ್ನು ಅಲ್ಲಗೆಳೆದ ಫೇಸ್‌ಬುಕ್ ಕಂಪನಿ, ನಾವು ಯಾವುದೇ ರೀತಿಯ ಹ್ಯಾಕಿಂಗ್‌ಗೆ ಒಳಗಾಗಿಲ್ಲ ಎಂದು ಹೇಳಿದೆ. ಸಂಯುಕ್ತ ರಾಷ್ಟ್ರಗಳು, ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ 40 ನಿಮಿಷಗಳ ಕಾಲ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸ್ತಬ್ಧವಾಗಿತ್ತು. ಲಾಗಿನ್ ಮಾಡಲು ಯತ್ನಿಸಿದಾಗ ', . ` ` ,' ಎಂಬ ಸಂದೇಶ ಪೇಜ್‌ನಲ್ಲಿ ಕಾಣಿಸುತ್ತಿತ್ತು.