2014ರಲ್ಲಿ ನೆಟಿಜನ್ಗಳು ಹೆಚ್ಚು ಸರ್ಚ್ ಮಾಡಿದ ಪದ ಯಾವುದು? ಬಿಂಗ್ ಸರ್ಚ್ ಇಂಜಿನ್ ಭಾರತೀಯ... ಬಿಂಗ್ ಸರ್ಚ್ ಇಂಜಿನ್, ಭಾರತೀಯ ನೆಟಿಜನ್ಗಳು 2014ರಲ್ಲಿ ಅಂತರ್ಜಾಲದಲ್ಲಿ ಅತೀ ಹೆಚ್ಚು ಸರ್ಚ್ ಮಾಡಿ ಪದಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಂದಿನಂತೆ ಈ ಪಟ್ಟಿಯಲ್ಲಿ ಸಿನಿಮಾ, ಸಂಗೀತ, ಕ್ರೀಡೆ, ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಸುದ್ದಿಗಳೇ ಹೆಚ್ಚಾಗಿ ಶೋಧ ಮಾಡಲ್ಪಟ್ಟಿವೆ, ಅಂತರ್ಜಾಲದಲ್ಲಿ ಹೆಚ್ಚು ಶೋಧಕ್ಕೊಳಗಾದ ರಾಜಕಾರಣಿಯೆಂದರೆ ಪ್ರಧಾನಿ ನರೇಂದ್ರ ಮೋದಿ. ಮೋದಿಯ ನಂತರ ಜಯಲಲಿತಾ, ಸ್ಮೃತಿ ಇರಾನಿ ,ಜವಾಹರ್ ಲಾಲ್ ನೆಹರೂ ಅವರ ಹೆಸರನ್ನು ಅಧಿಕ ಬಾರಿ ಸರ್ಚ್ ಮಾಡಲಾಗಿದೆ. ಕ್ರೀಡಾ ವಿಭಾಗದಲ್ಲಿ ಸೌರವ್ ಗಂಗೂಲಿ ಹೆಸರು ಹೆಚ್ಚು ಬಾರಿ ಸರ್ಚ್ ಮಾಡಲ್ಪಟ್ಟಿದ್ದು, ಸೆಲೆಬ್ರಿಟಿ ಪಟ್ಟಿಯಲ್ಲಿ ಸನ್ನಿ ಲಿಯೋನಿ ಮುಂದಿದ್ದಾಳೆ. ಅದೇ ವೇಳೆ ಕತ್ರೀನಾ ಕೈಫ್ , ದೀಪಿಕಾ ಪಡುಕೋಣೆ ಹೆಸರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಶೋಧಕ್ಕೊಳಪಟ್ಟಿದೆ. ಭಾರತೀಯರು 2014ರ ಸಾರ್ವತ್ರಿಕ ಚುನಾವಣೆ, ಮಂಗಳಯಾನ್ ಮಾರ್ಸ್ ಆರ್ಬಿಟರ್ ಬಗೆಗಿನ ಸುದ್ದಿಗಿಂತಲೂ ಹೆಚ್ಚು ಬಾರಿ ಇಸಿಸ್ ಬಗ್ಗೆ ಸರ್ಚ್ ಮಾಡಿದ್ದಾರೆ. ಏತನ್ಮಧ್ಯೆ, ಸಿನಿಮಾ ವಿಭಾಗದಲ್ಲಿ ಸನ್ನಿ ಲಿಯೋನಿ ನಟಿಸಿದ ರಾಗಿಣಿ ಎಂಎಂಎಸ್ -2 ಸಿನಿಮಾ ಹೆಚ್ಚು ಬಾರಿ ಸರ್ಚ್ ಮಾಡಲ್ಪಟ್ಟಿದೆ. ಅಧಿಕ ಬಾರಿ ಸರ್ಚ್ ಮಾಡಲ್ಪಟ್ಟ ಪದಗಳು ಹೀಗಿವೆ