ಈ ರೊಬೋಗೆ ಮಕ್ಕಳಾಗುತ್ತೆ ಇತ್ತೀಚೆಗಷ್ಟೆ ಜಿಬೋ ಎಂಬ ಪ್ರಥಮ ಹಯೋಮ್ ರೊಬೋಟ್ ಜಗತ್ತಿಗೆ ಪರಿಚಯವಾಗಿತ್ತು. ಭಾರತೀಯ ರೊಬೋಟ್ ಚಿತ್ರಗ ಳಿಂದ ಸ್ಫೂರ್ತಿ... ಲಂಡನ್ : ಇತ್ತೀಚೆಗಷ್ಟೆ ಜಿಬೋ ಎಂಬ ಪ್ರಥಮ ಹಯೋಮ್ ರೊಬೋಟ್ ಜಗತ್ತಿಗೆ ಪರಿಚಯವಾಗಿತ್ತು. ಭಾರತೀಯ ರೊಬೋಟ್ ಚಿತ್ರಗ ಳಿಂದ ಸ್ಫೂರ್ತಿ ಪಡೆದಿದೆಯೇನಯೋ ಎಂಬಂತೆ ಜಿಬೋ ಭಾವನಾತ್ಮಕವಾಗಿಯೂ ಸ್ಪಂದಿಸುವಂತೆ ಪ್ರೋಗ್ರಾಮ್ ಮಾಡಲಾಗಿತ್ತು ಎಂಬು ದು ಅದರ ವಿಶೇಷ. ಕಥೆ ಹೇಳಯೋ ದ್ರಿಂದ ಹಿಡಿದು, ನಿಮ್ಮ ದಿನಚರಿ ನೆನಪಿಸುವ ತನಕ, ನಿಮ್ಮ ಮೂಡಿಗೆ ತಕ್ಕಂತೆ ವರ್ತಿಸುವ ಜಿಬೋ ಬಗ್ಗೆ ತಿಳಿದೇ ಅಚ್ಚರಿ ಪಟ್ಟಿದ್ದರೆ, ಈಗ ಅದನ್ನು ದ್ವಿಗುಣಗೊಳಿಸುವ ಅಚ್ಚರಿ ನಿಮಗೆ ಕಾದಿದೆ. ವಿಜ್ಞಾನಿಗಳು ರೊಬೋಟನ್ನೇ ಸೃಷ್ಟಿಸಬಲ್ಲ ರೊಬೋಟ್ ತಯಾರಿಸಿ ಎಲ್ಲರ ಹುಬ್ಬೇರು ವಂತೆ ಮಾಡಿದ್ದಾರೆ. ಇದು ತಂತ್ರಜ್ಞಾನದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೋ ಮನುಕುಲಕ್ಕೆ ಅಪಾಯ ಮೈಮೇಲೆಳೆದುಕೊಳ್ಳುವ ಸಾಹಸವಯೋ ಕಾಲ ಉತ್ತರಿಸೀತು. ಏಕೆಂದರೆ ಇತ್ತೀಚೆಗೆ ರೊಬೋಟ್‍ಗಳೇ ಮನುಷ್ಯನನ್ನು ಕೊಂದಿರುವ ಹಲವು ಉದಾಹರಣೆಗಳು ನಮ್ಮೆದುರಿವೆ. ತಾಯಿ ರೋಬೊಟ್ ಮತ್ತು 10 ಮಕ್ಕಳು: ಬ್ಲಾಕ್ಸ್ ಮತ್ತು ಮೋಟಾರ್‍ಗಳ ಸಹಾಯದಿಂದ ಚಲಿಸುವ ಒಂದು ರೊಬೋಟನ್ನು ಕೇಂಬ್ರಿಜ್ ಯೂನಿವರ್ಸಿಟಿಯ ಸಂಶಯೋಧಕರು ತಯಾರಿಸಿದ್ದು, ಆ ರೊಬೋಟ್‍ಅನ್ನು ತಾಯಿ ರೊಬೋಟ್ ಎಂದು ಗುರುತಿಸಿದ್ದಾರೆ. ಅದಕ್ಕೆ ಹತ್ತು ಬೇಬಿ ರೊಬೋಟ್‍ಗಳನ್ನು ಸೃಷ್ಟಿಸುವ ಗುರಿ ನೀಡಿದ್ದಾರೆ. ಹಾಗೆ ಸೃಷ್ಟಿಸಲ್ಪಟ್ಟ ರೊಬೋಟ್‍ಗಳನ್ನು ಚಲಿಸಲು ಬಿಟ್ಟು, ಅತ್ಯಂತ ವೇಗವಾಗಿ ಚಲಿಸುವ ರೊಬೋಟ್ ಗಳನ್ನು ಆಯ್ಕೆ ಮಾಡಿ. ನಿಧಾನದ ಮರಿ ರೊಬೋಟ್‍ಗಳನ್ನು ಮರುವಿನ್ಯಾಸಕ್ಕೆ ಕಳಿಸಿದ್ದಾರೆ. ಆ ಗುಂಪಿನಲ್ಲಿ ಆಯ್ಕೆಯಾದ ರೊಬೋಟ್‍ಗಳು ಈ ಜನರೇಶನ್‍ನ ಫಾಸ್ಟೆಸ್ಟ್ ರೊಬೋಟ್‍ಗಳ ದುಪ್ಪಟ್ಟು ವೇಗದಲ್ಲಿ ಚಲಿಸುತ್ತವೆಂಬುದು ಅಚ್ಚರಿಯ ವಿಷಯ. ಐದು ಪ್ರೋಗಗಳನ್ನು ನಡೆಸಿದ ವಿಜ್ಞಾನಿಗಳ ತಂಡ ಈ ತಾಯಿ ರೊಬೋಟ್‍ನ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದೆ. ಮಾನವನ ಸಹಾಯವೇ ಇಲ್ಲದೆ ಈ ರೊಬೋಟ್ ಸಲೀಸಾಗಿ 10 ಮರಿ ರೊಬೋಟ್‍ಗಳನ್ನು ವಿನ್ಯಾಸಗೊಳಿಸಿ, ಸೃಷ್ಟಿ ಮಾಡಿ ಟೆಸ್ಟ್ ಕೂಡ ಮಾಡಿದೆ. ಆ ಮರಿ ರೊಬೋಟ್‍ಗಳ ಗುಣವೈಶಿಷ್ಟ, ಕಾರ್ಯವೈಖರಿ, ರೂಪ ಎಲ್ಲವೂ ತನ್ನ ಸೃಷ್ಟಿಕರ್ತನನ್ನೇ ಹಯೋಲುವುದು ಡಬಲ್ ಆಶ್ಚರ್ಯ.