ಫೇಸ್ ಬುಕ್ ನಿಂದ ಉಚಿತ ಇಂಟರ್ ನೆಟ್ ಇದೇ ವರ್ಷ ಜಾರಿ..! ಫೇಸ್ ಬುಕ್ ತನ್ನ ಖಾತೆದಾರರಿಗೆ ಈ ವರ್ಷ ಸಿಹಿ ಸುದ್ದಿಯೊಂದನ್ನು ನೀಡಲಿದ್ದು, ಇದೇ ವರ್ಷದಲ್ಲಿ ತನ್ನ ಕನಸಿನ ಯೋಜನೆ ಉಚಿತ ಇಂಟರ್ ನೆಟ್ ಸೇವೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ.. ಪ್ರಮುಖ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಖಾತೆದಾರರಿಗೆ ಈ ವರ್ಷ ಸಿಹಿ ಸುದ್ದಿಯೊಂದನ್ನು ನೀಡಲಿದ್ದು, ಇದೇ ವರ್ಷದಲ್ಲಿ ತನ್ನ ಕನಸಿನ ಯೋಜನೆ ಉಚಿತ ಇಂಟರ್ ನೆಟ್ ಸೇವೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಫೇಸ್ ಬುಕ್ ಸಂಸ್ಥೆಯು ಈಗಾಗಲೇ . ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ ಈ ಯೋಜನೆಯನ್ನು ಈ ವರ್ಷ 100 ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಜಾರಿಗೆ ತರಲು ಫೇಸ್ ಬುಕ್ ಯೋಜಿಸಿದ್ದು, ಝಾಂಬಿಯಾ, ಟಾಂಜೇನಿಯಾ, ಕೀನ್ಯಾ, ಕೊಲಂಬಿಯಾ ಮತ್ತು ಭಾರತ ದೇಶ ಸೇರಿದಂತೆ ವಿಶ್ವದ 100 ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಜಾರಿಗೊಳಿಸುವುದಾಗಿ . ಸಂಸ್ಥೆಯ ಉಪಾಧ್ಯಕ್ಷ ಕ್ರಿಸ್ ಡೇನಿಸ್ ಹೇಳಿದ್ದಾರೆ. ಗೂಗಲ್ ಸಂಸ್ಥೆ ಇಂತಹುದೇ ಯೋಜನೆಗಾಗಿ ಈಗಾಗಲೇ ಸಿದ್ಧತೆ ನಡೆಸಿಕೊಂಡಿದ್ದು, ಅದಕ್ಕೂ ಮೊದಲೇ ತನ್ನ ಉಚಿತ ಇಂಟರ್ ನೆಟ್ ಯೋಜನೆಯನ್ನು ಜಾರಿಗೆ ತರಬೇಕು ಎಂದು ಫೇಸ್ ಬುಕ್ ಹವಣಿಸುತ್ತಿದೆ. ಗೂಗಲ್ ಪ್ರಾಜೆಕ್ಟ್ ಲೂನ್ ಮತ್ತು ಪ್ರಾಜೆಕ್ಟ್ ಟೈಟನ್ ಹೆಸರಲ್ಲಿ ಸಿದ್ಧತೆ ನಡೆಸಿಕೊಂಡಿದೆ. ಮೂಲಗಳ ಪ್ರಕಾರ ಈ ಯೋಜನೆಗಳು ಕೂಡ ಇದೇ ವರ್ಷ ಜಾರಿಗೆ ಬರುವ ಸಾಧ್ಯತೆ ಇದೆ. ಇನ್ನು ಈ ಸಂಸ್ಥೆಗಳು ಸಿದ್ಧಪಡಿಸುತ್ತಿರುವ ಈ ಯೋಜನೆಗಳಲ್ಲಿ ಇಂಟರ್ನೆಟ್ ಬಳಕೆದಾರರು ಫೇಸ್ ಬುಕ್, ಗೂಗಲ್ ಮತ್ತು ವಿಕಿಪೀಡಿಯಾಗಳನ್ನು ಬಳಸಬಹುದಾಗಿದೆ. ಪ್ರಮುಖವಾಗಿ ವಿವಿಧ ದೇಶಗಳಲ್ಲಿರುವ ಕುಗ್ರಾಮಗಳ ಇಂಟರ್ ನೆಟ್ ಬಳಕೆದಾರರನ್ನು ಕೇಂದ್ರವಾಗಿರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿ ಶೀಲ ದೇಶಗಳಲ್ಲಿನ ಇಂಟರ್ ನೆಟ್ ಬಳಕೆ ಮಾಡದ ಶೇ.90ರಷ್ಟು ಮಂದಿಗೆ ಇಂಟರ್ ನೆಟ್ ಸೇವೆ ಒದಗಿಸುವ ದೃಷ್ಟಿಕೋನದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಕ್ರಿಸ್ ಡೇನಿಸ್ ಹೇಳಿದ್ದಾರೆ. ಭಾರತದ ಯಾವ ರಾಜ್ಯಗಳಲ್ಲಿ ಈ ಯೋಜನೆ ಜಾರಿ..? ಫೇಸ್ ಬುಕ್ ನ ಈ ಕನಸಿನ ಯೋಜನೆಯನ್ನು ಭಾರತದಲ್ಲಿ ಮೊದಲ ಹಂತದಲ್ಲಿ ಐದು ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿದೆ. ಭಾರತದಲ್ಲಿ ಹೆಚ್ಚುತ್ತಿರುವ ಫೇಸ್ ಬುಕ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿರುವ ಫೇಸ್ ಬುಕ್, ತಮಿಳುನಾಡು, ಕೇರಳ, ಮಹಾರಾಷ್ಟ, ತೆಲಂಗಾಣ, ಗುಜರಾತ್ ಹಾಗೂ ಆಂಧ್ರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಈ ಯೋಜನೆ ವಿಸ್ತರಿಸುವ ಗುರಿಯನ್ನು ಫೇಸ್ ಬುಕ್ ಹೊಂದಿದೆ. ಇದರಿಂದ ತನ್ನ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಫೇಸ್ ಬುಕ್ ಇದ್ದು, ಈ ಸೇವೆ ಆರಂಭಿಸುವ ಮೂಲಕ ಇಂಟರ್ ನೆಟ್ ಕನೆಕ್ಷನ್ ಹೊಂದಿರದ 1 ಬಿಲಿಯನ್ ಬಳಕೆದಾರರನ್ನು ತಲುಪುವ ವಿಶ್ವಾಸ ಹೊಂದಿದೆ. -ಶ್ರೀನಿವಾಸ ಮೂರ್ತಿ ವಿಎನ್