ಮೊಬೈಲಲ್ಲೇ ಲಾಂಗ್ವೇಜ್ ಕ್ಲಾಸ್ ಭಾಷೆಗಳನ್ನು ಕಲಿಯಲು ಇಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿನ ಅಪ್ಲಿಕೇಷನ್‌ಗಳು ವೇದಿಕೆಯಾಗುತ್ತಿವೆ... ಭಾಷೆಗಳನ್ನು ಕಲಿಯಲು ಇಂದು ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿನ ಅಪ್ಲಿಕೇಷನ್‌ಗಳು ವೇದಿಕೆಯಾಗುತ್ತಿವೆ. ಇಂಥ ಹತ್ತಾರು ಅಪ್ಲಿಕೇಷನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ ಡಿಯೋಲಿಂಗೊ. ಈ ಅಪ್ಲಿಕೇಷನ್ ಮೂಲಕ ವಿಶ್ವದ ಆರು ಭಾಷೆಗಳನ್ನು ಕಲಿಯಬಹುದು. ಮತ್ತೊಂದು ಖುಷಿಯ ವಿಚಾರವೆಂದರೆ ಏ.24ರಿಂದ ಹಿಂದಿ ಭಾಷಿಕರೂ ಜಗತ್ತಿನ 6 ಭಾಷೆಯನ್ನು ಈ ಅಪ್ಲಿಕೇಷನ್ ಮೂಲಕ ಕಲಿಯಬಹುದು. ಸ್ಪ್ಯಾನಿಶ್, ಫ್ರೆಂಚ್, ಜರ್ಮನ್, ಪೋರ್ಚುಗೀಸ್, ಇಟಾಲಿಯನ್ ಹಾಗೂ ಇಂಗ್ಲಿಷ್ ಅನ್ನು ಕಲಿಯಬಹುದಾಗಿದೆ. ಭವಿಷ್ಯದಲ್ಲಿ ಭಾರತದ ಉಳಿದ 20ಕ್ಕೂ ಅಧಿಕ ಭಾಷೆಗಳನ್ನು ಇದರಲ್ಲಿ ಸೇರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಡೆವಲಪರ್ಸ್ ಹೇಳಿಕೊಂಡಿದ್ದಾರೆ.