ಐಒಎಸ್ ಬಳಕೆದಾರರಿಗೆ ವೆಬ್ ವಾಟ್ಸ್ ಆಪ್ ಸೌಲಭ್ಯ 8 ತಿಂಗಳ ಕಾಯುವಿಕೆ ನಂತರ ಐಫೋನ್ ಬಳಕೆದಾರರಿಗೆ ವೆಬ್ ವಾಟ್ಸ್ ಆಪ್ ಬಳಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ. 8 ತಿಂಗಳ ಕಾಯುವಿಕೆ ನಂತರ ಐಫೋನ್ ಬಳಕೆದಾರರಿಗೆ ವೆಬ್ ವಾಟ್ಸ್ ಆಪ್ ಬಳಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಾಟ್ಸ್ ಆಪ್ ಐಒಎಸ್ ನ್ನು ವೆಬ್ ಅಪ್ಲಿಕೇಶನ್ ಗೆ ಸೇರ್ಪಡೆಗೊಳಿಸಿದ್ದು, ಇನ್ನು ಮುಂದೆ ಐ ಫೋನ್ ಬಳಕೆದಾರರು ತಮ್ಮ ವಾಟ್ಸ್ ಆಪ್ ಖಾತೆಯನ್ನು ವಾಟ್ಸ್ ಆಪ್ ವೆಬ್ ಮೂಲಕವೂ ಬಳಸಬಹುದಾಗಿದೆ. ಡೆಸ್ಕ್ ಟಾಪ್ ನಲ್ಲಿ ಕಾಣುವ ಕ್ಯೂರ್ ಆರ್ ಕೋಡ್ ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ವಾಟ್ಸ್ ಆಪ್ ವೆಬ್ ಸೌಲಭ್ಯ ಸಕ್ರಿಯಗೊಳ್ಳಲಿದೆ. ಇತ್ತೀಚಿಗೆ ಪರಿಚಯಿಸಲಾದ ಹೊಸ ವೈಶಿಷ್ಟ್ಯದಿಂದ ಐಪೋನ್ ಬಳಕೆದಾರರು ವೈಯಕ್ತಿಕ ಚಾಟ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ. ಹಳೆಯ ಸಂದೇಶಗಳು ಸ್ವಯಂಚಾಲಿತವಾಗಿ ಲೋಡ್ ಆಗುವುದು ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಐ ಫೋನ್ ನ ವೆಬ್ ವಾಟ್ಸ್ ಆಪ್ ಸಹ ಹಲವು ವಿಶಿಷ್ಠ ಸೌಲಭ್ಯಗಳನ್ನು ಹೊಂದಿದೆ.