ನಗುವಿಗೂ ಒಂದು ಕಾರಣ ಖುಷಿಯ ನಗೆ, ರೇಗಿಸುವ ನಗೆ... ಇದೆನಪ್ಪಾ ಎಂದು ಅಚ್ಚರಿಯೇ? ಹೌದು, ವಿಜ್ಞಾನಿಗಳು ನಗೆಯನ್ನೂ ವಿಂಗಡಿಸಿದ್ದಾರೆ. ಮಾನವನ ಮೆದುಳಿನ ಬಗ್ಗೆ ಅಧ್ಯಯನ ನಡೆಸಿದ ನಂತರ ಅವರು ನಗೆಯಲ್ಲೂ ವಿವಿಧ ಭಾಗಗಳಿವೆ ಎಂದಿದ್ದಾರೆ. ನಮ್ಮ ನಗೆಗೆ ಮೆದುಳು ಹೇಗೆ ರಿಯಾಕ್ಟ್ ಮಾಡುತ್ತೆ ಎಂಬುದನ್ನೂ ಅವರು ವಿವರಿಸಿದ್ದಾರೆ. ಖುಷಿಯಲ್ಲಿದ್ದಾಗ ನಾವು ನಗುವುದು ಮತ್ತು ಇನ್ನೊಬ್ಬರನ್ನು ರೇಗಿಸಿ ಬರುವ ನಗೆಗೂ ವ್ಯತ್ಯಾಸವಿದೆ ಎಂದಿದ್ದಾರೆ. ನಗೆಗೂ, ಮೆದುಳಿಗೂ ತೀರಾ ಹತ್ತಿರದ ಸಂಬಂಧವಿದ್ದು, ನಗುವಾಗ ಮೆದುಳಿನ ಪ್ಯಾಟ್ರನ್ ಬದಲಾಗಿಬಿಡುತ್ತೆ ಎಂದು ಹೇಳಿದ್ದಾರೆ. ಹೋಗಲಿ ಬಿಡಿ, ನಗೆಯಲ್ಲಿ ಎಷ್ಟು ವ್ಯತ್ಯಾಸವಿದ್ದರೇನು? ವಿಜ್ಞಾನಿಗಳು ಇನ್ನೂ ಮುಂದುವರಿದು ಹೋಗಿ, ನೀವು ಎಷ್ಟು ಬೇಕಾದರೂ ನಕ್ಕುಬಿಡಿ, ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿ ಸುಧಾರಿಸುತ್ತೆ ಎಂದು ಹೇಳಿದ್ದಾರೆ.