ಮೈಕ್ರೊಸಾಫ್ಟ್ ಭಾರಿ ನಷ್ಟ ಮೈಕ್ರೊಸಾಫ್ಟ್ ಕಾರ್ಪೋರೇಷನ್ ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ 320ಕೋಟಿ... ನ್ಯೂಯಾರ್ಕ್: ಮೈಕ್ರೊಸಾಫ್ಟ್ ಕಾರ್ಪೋರೇಷನ್ ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ 320ಕೋಟಿ ಡಾಲರ್ ನಷ್ಟ ಅನುಭವಿಸಿದೆ. ನೋಕಿಯಾ ಫೋನ್ ಕಂಪನಿಯ ಸಾಲವನ್ನು ವಹಿಸಿಕೊಂಡಿದ್ದರಿಂದ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬೇಡಿಕೆ ಕುಸಿದ್ದರಿಂದ ನಿವ್ವಳ ಲಾಭ ಕುಸಿದಿದೆ. ಇದು ಕಂಪನಿ ಕಂಡಿರುವ ಅತಿ ದೊಡ್ಡ ನಷ್ಟವಾಗಿದೆ. ಕಳೆದ ವರ್ಷ ನೋಕಿಯಾ ಕಂಪನಿಯನ್ನು ಖರೀದಿಸಿದ ನಂತರ ಕಳೆದ ವರ್ಷದ ಕೊನೆ ತ್ರೈಮಾಸಿಕದಲ್ಲಿ ಪುನರ್ ರಚನೆಗೆ ಮುಂದಾಯಿತು. ಇದಕ್ಕಾಗಿ 750 ಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ಹೊಸ ಪಿಸಿಗಳ ಮಾರಾಟದಲ್ಲೂ ಶೇ.22ರಷ್ಟು ಕುಸಿತ ಕಂಡಿದೆ. ಶ್ರೀಮಂತ ದಂಪತಿ: ಜಗತ್ತಿನ ಶ್ರೀಮಂತ ದಂಪತಿ ಯಾರು ಗೊತ್ತೆ? ಮೈಕ್ರೊಸಾಫ್ಟ್ ಕಂಪನಿಯ ಸಂಸ್ಥಾಪಕ ಬಿಲ್‍ಗೇಟ್ಸ್ ದಂಪತಿ. ಬಿಲ್‍ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂದ ಗೇಟ್ಸ್ ಒಟ್ಟು ಆಸ್ತಿ ಮೌಲ್ಯ 8,570 ಕೋಟಿ ಡಾಲರ್ (ಸುಮಾರು ರು.5.40 ಲಕ್ಷ ಕೋಟಿ). 2000ದಲ್ಲಿ ಈ ದಂಪತಿ ಸಮಾಜ ಸೇವೆಗಾಗಿ ಬಿಲ್‍ಗೇಟ್ಸ್ ಫೌಂಡೇಷನ್ ಸ್ಥಾಪಿಸಿದರು.