ಬಹುನಿರೀಕ್ಷಿತ ಐಫೋನ್ 6 ಎಸ್ ಮಾರುಕಟ್ಟೆಗೆ ಜಗತ್ತು ಕಾತರದಿಂದ ಕಾಯುತ್ತಿದ್ದ ಐಒಎಸ್9 ಕೊನೆಗೂ ಬಿಡುಗಡೆ ಕಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದ ಗ್ರಹಾಂಬೆಲ್ ಸಿವಿಕ್ ಆಡಿಟೋರಿಯಮ್ಮಿನಲ್ಲಿ ನಡೆದ... ಸ್ಯಾನ್ ಫ್ರಾನ್ಸಿಸ್ಕೋ: ಜಗತ್ತು ಕಾತರದಿಂದ ಕಾಯುತ್ತಿದ್ದ ಐಒಎಸ್9 ಕೊನೆಗೂ ಬಿಡುಗಡೆ ಕಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದ ಗ್ರಹಾಂಬೆಲ್ ಸಿವಿಕ್ ಆಡಿಟೋರಿಯಮ್ಮಿನಲ್ಲಿ ನಡೆದ ಕಿಕ್ಕಿರಿದ ಸಭೆಯಲ್ಲಿ ಐಒಎಸ್9 ಜೊತೆಗೆ ಐಫೋನ್ 6ಎಸ್ ಹಾಗೂ ಐಫೋನ್ 6ಎಸ್ ಪ್ಲಸ್ ಕೂಡ ಲೋಕಾರ್ಪಣೆಯಾಗಿದ್ದು, ಪರಿಷ್ಕೃತ ಆ್ಯಪಲ್ ಟಿವಿ ಸೆಟ್ ಪ್ ಬಾಕ್ಸ್ ಕೂಡ ಹೊರಬಂದಿದೆ. ಮಿತಿಮೀರಿದ ಕ್ರೇಜ್: ಜನರ ನಿರೀಕ್ಷೆ ಯಾವ ಮಟ್ಟದಲ್ಲಿತ್ತೆಂದರೆ, ತಮ್ಮ ಫೇವರಿಟ್ ಸಿನಿಮಾ ಬಿಡುಗಡೆಯಾಗುತ್ತಿದೆಯೇನೋ ಎಂಬಂತೆ ಆಡಿಟೋರಿಯಂ ಎದುರು ಹಿಂದಿನ ದಿನ ರಾತ್ರಿಯಿಂ ದಲೇ ಜನ ಕಾಯುತ್ತಿದ್ದ ದೃಶ್ಯಗಳೂ ಕಂಡುಬಂದಿವೆ. ಆ್ಯಪಲ್ ಕ್ರೇಜ್ ಇರುವ ಬ್ರಿಟನ್ ಯುವಕನೊಬ್ಬ ರೀಜೆಂಟ್ ರಸ್ತೆಯಲ್ಲಿ ರುವ ಆ್ಯಪಲ್ ಶೋರೂಂ ಹೊರಗಡೆ 6 ದಿನಗಳಿಂದ ಕಾದು ಕುಳಿತಿರುವುದು ಸೆನ್ಸೇಷನಲ್ ಸುದ್ದಿಯಾಗಿದೆ. ಲಖೋವ್ ಸೊಶಾಲಿಫ್ (27) ಹೆಸರಿನ ಈತನ ಬಳಿ ಆ್ಯಪಲ್ ಬಿಡುಗಡೆಮಾಡಿರುವ ಎಲ್ಲ ವಸ್ತುಗಳಿರುವುದಲ್ಲದೆ, ಈಗ ಬಿಡುಗಡೆಯಾಗ ಲಿರುವ 6 ಎಸ್ ಅನ್ನು ತಾನೇ ಮೊದಲು ಖರೀದಿಸಬೇಕೆಂಬ ಹಟದಲ್ಲಿ ಆತ ಕುಳಿತಿದ್ದಾನೆ. ಪ್ರತಿ ದಿನ ಆತನನ್ನು ಗಮನಿಸುತ್ತಿರುವ ಆ್ಯಪಲ್ ಶೋರೂಂ ನೌಕರನೇ ಇದನ್ನು ದೃಢೀಕರಿಸಿದ್ದಾರೆ.