ಫಿಲಿಪ್ಸ್ ನಿಂದ `ಮೊಬೈಲ್ ಸಂಜೀವಿನಿ' ಅಪ್ಲಿಕೇಷನ್ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫಿಲಿಪ್ಸ್ ಕಂಪನಿ ಶುಶ್ರೂಷಕಿಯರಿಗೆ ನೆರವಾಗುವ `ಮೊಬೈಲ್ ಸಂಜೀವಿನಿ' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ... ಬೆಂಗಳೂರು: ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫಿಲಿಪ್ಸ್ ಕಂಪನಿ ಶುಶ್ರೂಷಕಿಯರಿಗೆ ನೆರವಾಗುವ `ಮೊಬೈಲ್ ಸಂಜೀವಿನಿ' ಎಂಬ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಖಾಸಗಿ ಹೋಟೆಲ್‍ನಲ್ಲಿ ನಡೆದ ಫಿಲಿಪ್ಸ್ ಡಿಜಿಟಲ್ ಹೆಲ್ತ್ ಕೇರ್ ಕಾನ್ ಕ್ಲೇವ್2015ರಲ್ಲಿ ಮಾತನಾಡಿದ ಫಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್ ಸಿಇಒ ಶ್ರೀನಿವಾಸ್ ಪ್ರಸಾದ್ ಈ ವಿಷಯ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರು ರೋಗಿಗಳ ಕುಟುಂಬಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಹೊರುವ ಬದಲು ಈ ಅಪ್ಲಿಕೇಷನ್ ಬಳಸಿದರೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಿದರು. ಸ್ಮಾರ್ಟ್ಫೋನ್ ಬಳಸುವಂತಹವರು ಈ ಅ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು. 2025ರ ವೇಳೆಗೆ ಮೂರು ಬಿಲಿಯನ್ ಜನರಿಗೆ ತಲುಪುವ ಗುರಿ ಹೊಂದಲಾಗಿದೆ. ಈ ಮೂಲಕ ಆರೋಗ್ಯ ಸೇವೆ ಒದಗಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್, ಡಿಜಿಟಲ್ ಹಾಗೂ ಕ್ಲೌಡ್ ತಂತ್ರಜ್ಞಾನಗಳನ್ನು ಮೊಬೈಲ್ ಅಪ್ಲಿಕೇಷನ್‍ನಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು. ಮೆಡ್‍ವೆಲ್ ವೆಂಚರ್ಸ್ ಅಧ್ಯಕ್ಷ ವಿಶಾಲ್ ಬಾಲಿ ಉಪಸ್ಥಿತರಿದ್ದರು.