ಎಮ್‌ಟಿಎಸ್ ಬ್ಲೇಜ್ 5.0 ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ ಒಂದಾದ ಎಮ್‌ಟಿಎಸ್, ತನ್ನ ನೂತನ ಬ್ಲೇಜ್ 5.0 ಸ್ಮಾರ್ಟ್‌ಫೋನ್ ... ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ ಒಂದಾದ ಎಮ್‌ಟಿಎಸ್, ತನ್ನ ನೂತನ ಬ್ಲೇಜ್ 5.0 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ. ಕ್ವಾಲ್ ಕಾಮ್‌ನ ಸ್ನಾಪ್ ಡ್ರಾಗನ್‌ನ ತಂತ್ರಜ್ಞಾನ ಅಳವಡಿಸಲಾಗಿದ್ದು ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಒಎಸ್ ಹೊಂದಿದೆ. 5 ಇಂಚಿನ ಪರದೇ , ಇವಿಡಿವೊ ಮತ್ತು ಜಿಎಸ್‌ಎಮ್‌ನ ಡ್ಯುಯೆಲ್ ಸಿಮ್ ಸೌಲಭ್ಯ ಎಮ್‌ಟಿಎಸ್ ಬ್ಲೇಜ್ 5.0 ಹೊಂದಿದೆ. ಸ್ಮಾರ್ಟ್ ಫೋನ್ ಜತಗೆ ಎಮ್‌ಟಿಎಸ್ ಸಿಮ್ ಕಾರ್ಡ್ ದೊರೆಯಲಿದ್ದು ಮೊದಲ ಬಾರಿಗೆ 198 ರಿಚಾರ್ಜ್ ಮಾಡಿಸಿದ್ದಲ್ಲಿ 1ಟಿಬಿ ವರೆಗೂ ಒಂದು ವರ್ಷದ ಅವಧಿಯ ತನಕ ಡಾಟಾ ಬಳಕೆಗೆ ಅವಕಾಶವಿರುತ್ತದೆ. ಬ್ಲೇಜ್ 5.0 ಅನೇಕ ವಿಶೇಷಗಳಿಂದ ಕೂಡಿದ್ದು, ಪ್ರಮುಖವಾಗಿ ಅಧಿಕ ಸಮಯದ ಬ್ಯಾಟರಿ ಬಾಳಿಕೆ, 8 ಮೆಗಾ ಪಿಕ್ಸ್‌ಲ್ ಕ್ಯಾಮೆರಾ, 32 ಜಿಬಿ ವರೆಗೂ ಸಂಗ್ರಹಣ ಸಾಮರ್ಥ್ಯ ಹಾಗೂ ಎಂಟಿಎಸ್ ಪ್ಲೇ ಗ್ರೌಂಡ್, ವಿಜಾರ್ಡ್, ಎಂಟಿಎಸ್ ಟಿವಿ ಮೂಲಕ 100ಕ್ಕೂ ಹೆಚ್ಚು ಟಿವಿ ಚಾನಲ್ ವೀಕ್ಷಿಸಬಹುದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 11 ಸಾವಿರಕ್ಕೆ ಲಭ್ಯವಿದೆ.