ಬಾಗಿದ ಗ್ಲಾಸ್ ಹೇಗೆ ಮಾಡ್ತಾರೆ ಗೊತ್ತಾ? ಬಾಗಿದ ಗ್ಲಾಸ್‌ಗಳನ್ನು ತಯಾರಿಸೋದು ತುಂಬಾ ಕಷ್ಟದ ಕೆಲಸ. ಇದು ಹೆಚ್ಚು ಕುಶಲತೆ ಕೇಳುವ ಕೆಲಸ ಕೂಡ. ಕೆಲಸಗಾರರು ಮೊದಲಿಗೆ ಬೇಕಾದ ಅಳತೆಯ ಗ್ಲಾಸ್ ಶೀಟ್ ಅನ್ನು ತೆಗೆದುಕೊಳ್ಳುತ್ತಾರೆ. ಬಳಿಕ ಅದನ್ನು ಶುಚಿಗೊಳಿಸಿ ಪಾಲಿಷ್ ಮಾಡುತ್ತಾರೆ. ಯುವಿ ಲ್ಯಾಂಪ್ ಹಿಡಿದು ಗ್ಲಾಸ್‌ಶೀಟ್ ಮೇಲೆ ಏನಾದರೂ ಬಿದ್ದಿದೆಯೇ ಎಂದು ಮತ್ತೆ ಪರೀಕ್ಷಿಸುತ್ತಾರೆ. ಕಾರಣ, ಏನಾದರೂ ಡಸ್ಟ್ ಬಿದ್ದಿದಿಯೇ ಎಂದು ಪರೀಕ್ಷೆ ಮಾಡಲು. ಒಂದು ವೇಳೆ ಚಿಕ್ಕದೊಂದು ದೂಳಿನ ಕಣ ಬಿದ್ದರೂ ಗ್ಲಾಸ್ ಹಾಳಾಗಿ ಹೋಗುತ್ತದೆ. ಗ್ಲಾಸ್ ಅನ್ನು ಬಗ್ಗಿಸುವ ಸಲುವಾಗಿ ಸ್ಟೀಲ್‌ನಿಂದ ಒಂದು ಮೌಲ್ಡ್ ಅನ್ನು ಮಾಡಿರುತ್ತಾರೆ. ಗ್ಲಾಸ್ ಅನ್ನು ಮೌಲ್ಡ್ ಒಳಕ್ಕೆ ಸೇರಿಸುವಾಗ ಸಿಕ್ಕಿಹಾಕಿಕೊಳ್ಳದಂತಿರಲು ಅದಕ್ಕೆ ಡಿಟರ್ಜೆಂಟ್ ಮತ್ತು ಕ್ಯಾಲ್ಸಿಯಂ ಕಾರ್ಬೋನೇಟ್ ಹಚ್ಚಲಾಗುತ್ತದೆ. ಇದಾದ ನಂತರ ಮೌಲ್ಡ್‌ನೊಳಗೆ ಸೇರಿಸಿ ಅದಕ್ಕೆ 700 ಸೆಂಟಿಗ್ರೇಡ್ ಶಾಖ ಕೊಡಲಾಗುತ್ತದೆ. ಈ ಶಾಖದಿಂದಾಗಿ ಗ್ಲಾಸ್ ಕರಗಲು ಆರಂಭವಾಗುತ್ತದೆ. ಬಳಿಕ ಬೇಕಾದ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಇದು ಆಕಾರಕ್ಕೆ ಬಂದ ಬಳಿಕ ಮೌಲ್ಡ್ ಅನ್ನು ಆಫ್ ಮಾಡಬೇಕು. ಗ್ಲಾಸ್ ಕರಗಲು ಕನಿಷ್ಠ 2 ಗಂಟೆ ಬೇಕು.