ಬೆಂಗಳೂರಿನಲ್ಲಿ ಆ್ಯಪಲ್ ಸಂಸ್ಥೆಯ ಡಿಸೈನ್ ಕೇಂದ್ರ ಸ್ಥಾಪನೆ: ಟಿಮ್ ಕುಕ್ ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್, ಭಾರತಕ್ಕೆ ಭೇಟಿ ನೀಡಿದ್ದು ಬೆಂಗಳೂರಿನಲ್ಲಿ ಆ್ಯಪಲ್ ಸಂಸ್ಥೆಯ ಡಿಸೈನ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ನವದೆಹಲಿ: ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್, ಭಾರತಕ್ಕೆ ಭೇಟಿ ನೀಡಿದ್ದು ಬೆಂಗಳೂರಿನಲ್ಲಿ ಆ್ಯಪಲ್ ಸಂಸ್ಥೆಯ ಡಿಸೈನ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಡಿಸೈನ್ ಕೇಂದ್ರ( ವಿನ್ಯಾಸ ಕೇಂದ್ರ) ದೇಶಾದ್ಯಂತ ಇರುವ ಐಫೋನ್ ಡೆವಲಪರ್ ಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಕುಕ್ ಭೇಟಿಗೂ ಮುನ್ನ ಪ್ರಕಟವಾಗಿದ್ದ ವರದಿಗಳ ಪ್ರಕಾರ ಈ ವಿನ್ಯಾಸ ಕೇಂದ್ರ ಹೈದರಾಬಾದ್ ನಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ್ಯಪಲ್ ಸಂಸ್ಥೆ ಅಂತಿಮವಾಗಿ ಬೆಂಗಳೂರಿನಲ್ಲೇ ಡಿಸೈನ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಆ್ಯಪಲ್ ಸಂಸ್ಥೆ ಭಾರತದಲ್ಲಿ ಡಿಸೈನ್ ಕೇಂದ್ರ ಪ್ರಾರಂಭಿಸಲು ಈಗಾಗಲೇ 100 ಮಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿದ್ದು 2017 ರ ವೇಳೆಗೆ ಡಿಸೈನ್ ಕೇಂದ್ರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಭಾರತಕ್ಕೆ ಭೇಟಿ ನೀಡಿರುವ ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.