ಮೇ ತಿಂಗಳಲ್ಲಿ 65 ಲಕ್ಷ ವಾಟ್ಸ್ ಆಪ್ ಖಾತೆಗಳ ನಿಷೇಧ 2021 ರ ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ ವಾಟ್ಸ್ ಆಪ್ ಮೇ ತಿಂಗಳಲ್ಲಿ 65 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಿದೆ. ನವದೆಹಲಿ: 2021 ರ ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ ವಾಟ್ಸ್ ಆಪ್ ಮೇ ತಿಂಗಳಲ್ಲಿ 65 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಿದೆ. ಸ್ವತಃ ವಾಟ್ಸ್ ಆಪ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ.1 ರಿಂದ 31 ರ ವರೆಗೆ ನಿಷೇಧಗೊಂಡಿರುವ ವಾಟ್ಸ್ ಆಪ್ ಖಾತೆಗಳ ಪೈಕಿ 2,420,700 ಖಾತೆಗಳನ್ನು ಗ್ರಾಹಕರಿಂದ ವರದಿಯಾಗುವುದಕ್ಕೂ ಮುನ್ನ ಸ್ವಯಂ ಪ್ರೇರಿತವಾಗಿ ನಿರ್ಬಂಧಿಸಲಾಗಿದೆ.ಇದನ್ನೂ ಓದಿ: ಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್ಏಪ್ರಿಲ್ ತಿಂಗಳಿನಲ್ಲಿ ವಾಟ್ಸ್ ಆಪ್ ಭಾರತದಲ್ಲಿ 500 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು. ಈ ವರೆಗೂ 74 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಲಾಗಿದೆ.ಮೇ ತಿಂಗಳಲ್ಲಿ 3,912 ಕುಂದುಕೊರತೆ ವರದಿಗಳು, ನಿಷೇಧ ಮನವಿಗಳು ಬಂದಿದ್ದು, ಈ ಪೈಕಿ 297 ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ.