ಟ್ವಿಟರ್ ಖಾತೆಯಲ್ಲಿ ಪೂರ್ತಿಚಿತ್ರ ಟ್ವಿಟರ್‍ನಲ್ಲಿ ಇನ್ನು ಮುಂದೆ ಖಾತೆದಾರರ ಟೈಮ್ ಲೈನ್ ಚಿತ್ರಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸಲಿವೆ. ಖಾತೆಗೆ ಅಪ್‍ಲೋಡ್ ಮಾಡಲಾದ ಚಿತ್ರಗಳನ್ನು ಟ್ವಿಟರ್ ಇಷ್ಟು ದಿನ ಕ್ರಾಪ್ ಮಾಡಿ (ಕತ್ತರಿಸಿ)ಟೈಮ್ ಲೈನ್‍ನಲ್ಲಿ ಪ್ರದರ್ಶಿಸುತ್ತಿತ್ತು... ನವದೆಹಲಿ: ಟ್ವಿಟರ್‍ನಲ್ಲಿ ಇನ್ನು ಮುಂದೆ ಖಾತೆದಾರರ ಟೈಮ್ ಲೈನ್ ಚಿತ್ರಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸಲಿವೆ. ಖಾತೆಗೆ ಅಪ್‍ಲೋಡ್ ಮಾಡಲಾದ ಚಿತ್ರಗಳನ್ನು ಟ್ವಿಟರ್ ಇಷ್ಟು ದಿನ ಕ್ರಾಪ್ ಮಾಡಿ (ಕತ್ತರಿಸಿ)ಟೈಮ್ ಲೈನ್‍ನಲ್ಲಿ ಪ್ರದರ್ಶಿಸುತ್ತಿತ್ತು. ನಂತರ ಅದರ ಮೇಲೆ ಕ್ಲಿಕ್ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಚಿತ್ರ ಗೋಚರಿಸುತ್ತಿತ್ತು. ಆದರೆ, ಇನ್ನು ಮುಂದೆ ಅಪ್ ಲೋಡ್ ಮಾಡಿದ ಚಿತ್ರ ಟೈಮ್ ಲೈನ್‍ನಲ್ಲಿ ಪೂರ್ತಿಕಾಣಿಸಲಿದೆ. ಈ ಕುರಿತು ಟ್ವಿಟಿರ್ ತನ್ನ ಬ್ಲಾಗ್ ಸ್ಪಾಟ್‍ನಲ್ಲಿ ಪ್ರಕಟಿಸಿದೆ. ಚಿತ್ರಗಳ ಪ್ರದರ್ಶನ ರೀತಿಯನ್ನೂ ಬಲಸಿರುವ ಟ್ವಿಟರ್, ಮಲ್ಟಿ ಫೋಟೋ ಡಿಸ್‍ಪ್ಲೆಯನ್ನು ಜಾರಿಗೆ ತರುತ್ತಿದೆ. ಇನ್ನು ಮುಂದೆ ಟೈಮ್ ಲೈನ್ ಮತ್ತಷ್ಟು ಚಿತ್ರವತ್ತಾಗಿರಲಿದೆ ಎಂದೂ ಟ್ವಿಟರ್ ಹೇಳಿದೆ.