ಗೂಗಲ್ ಹೊಸ ಪಾಂಚ್ ಭಾರತದಲ್ಲಿ ಅಘಾಧವಾಗಿ ಹೆಚ್ಚುತ್ತಿರುವ ಮಾರುಕಟ್ಟೆ ಅವಕಾಶ... ಭಾರತದಲ್ಲಿ ಅಘಾಧವಾಗಿ ಹೆಚ್ಚುತ್ತಿರುವ ಮಾರುಕಟ್ಟೆ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಸಂಸ್ಥೆ, ಹೊಸ ಮಾದರಿಯ ನೆಕ್ಸಸ್ 6, ನೆಕ್ಸಸ್ 9 ಉಪಕರಣಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಜತೆಗೆ ಆ್ಯಂಡ್ರಾಯ್ಡ್‌ನ 5ನೇ ಆವೃತ್ತಿ 'ಲಾಲಿಪಪ್‌' ಅನ್ನೂ ಬಿಡುಗಡೆ ಮಾಡಿದೆ. 2 ಮಾದರಿಯಲ್ಲಿ ನೆಕ್ಸಸ್ ಮೋಟರೋಲಾ ಕಂಪನಿಯು ನೆಕ್ಸಸ್ 6 ಮಾದರಿಯನ್ನು ಅಬಿವೃದ್ಧಿಪಡಿಸಿದ್ದರೆ, ಎಚ್‌ಟಿಸಿ ಕಂಪನಿಯು ನೆಕ್ಸಸ್ 9 ಮಾದರಿಯನ್ನು ಅಬಿವೃದ್ಧಿಗೊಳಿಸಿದೆ. ಮಾರುಕಟ್ಟೆಯಲ್ಲಿ ನವೆಂಬರ್‌ನಲ್ಲಿ ಇವು ಲಭ್ಯವಾಗಲಿದ್ದು, ಇದೇ ತಿಂಗಳ ಅಂತ್ಯದ ವೇಳೆಗೆ ಇವು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ನೆಕ್ಸಸ್ ವಿಶೇಷತೆ ಮೋಟರೋಲಾ ನೆಕ್ಸಸ್ 6 ಆರು ಇಂಚು ಎಚ್‌ಡಿ ಡಿಸ್‌ಪ್ಲೇ, 13 ಎಂಪಿ ಕ್ಯಾಮೆರಾ, 3220 ಎಂಎಎಚ್ ಬ್ಯಾಟರಿ ಹೊಂದಿದೆ. ಎಲ್ಲಕ್ಕಿಂತ ವಿಶೇಷವೆಂದರೆ, ಕೇವಲ 15 ನಿಮಿಷಗಳಲ್ಲಿ ಇದನ್ನು ಚಾರ್ಜ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದ ಬಳಿಕ 6 ಗಂಟೆ ಸತತ ಬಳಸಬಹುದು. ಬೆಲೆ: 32 ಜಿಪಿ ಮಾದರಿ: ರು.40 ಸಾವಿರ. 64 ಜಿಬಿ ಮಾದಿರಿ: ರು.43 ಸಾವಿರ. ಎಚ್‌ಟಿಸಿ ನೆಕ್ಸಸ್ 9 8.9ಇಂಚು ಡಿಸ್‌ಪ್ಲೇ, ನಿವಿಡಾ ಟೆಗ್ರ ಕೆ1 64-ಬಿಟ್ ಡ್ಯುಯಲ್ ಪ್ರಾಸೆಸರ್, 8 ಎಂಪಿ ಹಿಂಬದಿ ಹಾಗೂ 1.6 ಎಂಬಿ ಮುಂಭಾಗದ ಕ್ಯಾಮೆರಾ. 16 ಜಿಬಿ, 32 ಜಿಬಿಗಳಲ್ಲಿ ಲಭ್ಯ. ಬೆಲೆ: 16ಜಿಬಿ ಮಾದರಿ: ರು.24,500, 32 ಜಿಬಿ, 32 ಜಿಬಿ ಎಲ್‌ಇಟಿ ಮಾದರಿ: ರು.37 ಸಾವಿರ. ಆ್ಯಂಡ್ರಾಯ್ಡ್ ಆಪರೇಠಿಂಗ್ ಸಿಸ್ಟಂನ 5ನೇ ಆವೃತ್ತಿ ಲಾಲಿಪಪ್ ಅನ್ನು ಗೂಗಲ್ ಬಿಡುಗಡೆಗೊಳಿಸಿದೆ. ಇದು ಈವರೆಗಿದ್ದ ಕಿಟ್‌ಕ್ಯಾಟ್‌ನ ಮುಂದಿನ ಆವೃತ್ತಿಯಾಗಿದ್ದು ಅದರ ವಿಶೇಷತೆಗಳು ಹೀಗಿವೆ...