ಇನ್ಮುಂದೆ ವಾಟ್ಸಾಪ್‌ನಲ್ಲಿ ಹೆಚ್ಚು ಗಾತ್ರದ ವೀಡಿಯೋ ಕೂಡಾ ಕಳಿಸಬಹುದು ಇದೀಗ ಪರಸ್ಪರ ಸಂದೇಶ ರವಾನೆ, ಚಾಟಿಂಗ್ ಎಲ್ಲವೂ ವಾಟ್ಸಾಪ್ ಮೂಲಕವೇ ನಡೆಯುತ್ತಿರುವಾಗ ವಾಟ್ಸಾಪ್ ಕೂಡಾ... ನವದೆಹಲಿ: ಇದೀಗ ಪರಸ್ಪರ ಸಂದೇಶ ರವಾನೆ, ಚಾಟಿಂಗ್ ಎಲ್ಲವೂ ವಾಟ್ಸಾಪ್ ಮೂಲಕವೇ ನಡೆಯುತ್ತಿರುವಾಗ ವಾಟ್ಸಾಪ್ ಕೂಡಾ ಹೊಸ ಹೊಸ ಬದಲಾವಣೆಗಳ ಮೂಲಕ ಜನಸ್ನೇಹಿಯಾಗುತ್ತಿದೆ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ವಾಟ್ಸಾಪ್‌ನಲ್ಲಿ ದೊಡ್ಡ ಸೈಜ್‌ನ ವೀಡಿಯೋಗಳನ್ನು ಕಳುಹಿಸಿವುದು ಕಷ್ಟವಾಗುತ್ತಿತ್ತು. ಆದರೆ ಈಗ 16 ಹೆಚ್ಚು ಗಾತ್ರದ ಫೈಲ್‌ಗಳನ್ನೂ ವಾಟ್ಸಾಪ್‌ನಲ್ಲಿ ಶೇರ್ ಮಾಡಬಹುದಾಗಿದೆ. ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್ ಎಂಬ ಈ ಅಪ್ಲಿಕೇಶನ್‌ನಿಂದಾಗಿ ದೊಡ್ಡ ಗಾತ್ರದ ಫೈಲ್ (ಸಿನಿಮಾ ಕೂಡಾ) ವಾಟ್ಸಾಪ್‌ನಲ್ಲಿ ಕಳುಹಿಸಬಹುದು. ಈ ಆ್ಯಪ್ ವೀಡಿಯೋ ಫೈಲ್‌ಗಳನ್ನು ಕಂಪ್ರೆಸ್ ಮಾಡಿ ವಾಟ್ಸಾಪ್ ನಲ್ಲಿ ಕಳುಹಿಸಲು ಸಾಧ್ಯವಾಗುವ ಸೈಜ್‌ಗೆ ಹೊಂದಿಸಲು ರೆಸಲ್ಯೂಷನ್‌ನ್ನು ಕಡಿಮೆ ಮಾಡಲಾಗುತ್ತದೆ. ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್‌ನ ವಿಶೇಷತೆಗಳು