ನಾಳೆ ಆ್ಯಪಲ್ ಮಹಾಮೇಳ ಸೆಪ್ಟೆಂಬರ್ ಅಂದರೆ ಅದು ಆ್ಯಪಲ್ ಮೇಳ. ಸೆಪ್ಟೆಂಬರ್ ಗಾಗಿ ಕಾಯುವ ಆ್ಯಪಲ್ ಪ್ರಿಯರಿದ್ದಾರೆ. ಸೇಬುಹಣ್ಣಿನ ಸೀಸನ್ ಬಗೆಗಿನ ಮಾತಲ್ಲ... ಸ್ಯಾನ್ಫ್ರಾನ್ಸಿಸ್ಕೊ: ಸೆಪ್ಟೆಂಬರ್ ಅಂದರೆ ಅದು ಆ್ಯಪಲ್ ಮೇಳ. ಸೆಪ್ಟೆಂಬರ್ ಗಾಗಿ ಕಾಯುವ ಆ್ಯಪಲ್ ಪ್ರಿಯರಿದ್ದಾರೆ. ಸೇಬುಹಣ್ಣಿನ ಸೀಸನ್ ಬಗೆಗಿನ ಮಾತಲ್ಲ ಇದು. ಇದು ಟೆಕ್‍ಟಾಕ್. ಸುಮಾರು 5ವರ್ಷಗಳ ನಂತರ ಆ್ಯಪಲ್ ಕಂಪನಿ ಮಹಾಮೇಳ ನಡೆಸುತ್ತಿದೆ. ಇದು ಕೇವಲ ಹೊಸ ಐಫೋನ್ ಬಿಡುಗಡೆಯ ಸಮಾರಂಭವಲ್ಲ. ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಸೆ.9ರಂದು ನಡೆಯಲಿರುವ ಸಂಭ್ರಮದಲ್ಲಿ ಬಹುನಿರೀಕ್ಷಿತ ಐಫೋನ್ 6ಎಸ್ ಲೋಕಾರ್ಪಣೆಯಾಗಲಿದೆ. ಆದರೆ ಸಂಭ್ರಮ ಅಷ್ಟಕ್ಕೇ ಸೀಮಿತವಾಗುತ್ತಿಲ್ಲ. ಬ್ರ್ಯಾಂಡ್ ಪ್ರಿಯರು ಹೆಚ್ಚಿನ ನಿರೀಕ್ಷೆಯಲ್ಲಿರುವುದನ್ನು ಗ್ರಹಿಸಿರುವ ಕಂಪನಿ ಇನ್ನೂ ಹಲವು ಉತ್ಪನ್ನಗಳನ್ನು ಘೋಷಿಸುವ ಯೋಜನೆಯಲ್ಲಿದೆ. ಕ್ಯುಪರ್ಟಿನೋ ವರದಿಗಳನ್ನು ನಂಬುವುದಾದರೆ ಈ ಬಾರಿ ನೀವು ಆ್ಯಪಲ್ ಟಿವಿ ನಿರೀಕ್ಷಿಸಬಹುದು. ಐಪ್ಯಾಡ್‍ಗಿಂತ ದೊಡ್ಡದಾದ ಹಾಗೂ ಹೆಚ್ಚು ಸಾಮಥ್ರ್ಯದ ಆ್ಯಪಲ್ ಟಿವಿ ಹಾಗೂ ಸುಧಾರಿತ ಐಪ್ಯಾಡ್ ಮಿನಿ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ. ಹೊಸ ಪ್ರಾಡೆಕ್ಟ್ ಮತ್ತು ವಿಶೇಷಗಳ ಬಗ್ಗೆ ಸಣ್ಣ ವರದಿ ಇಲ್ಲಿದೆ. ಅತಿ ಸುಧಾರಿತ ಪ್ರೊಸಸರ್: ಈ ಬಾರಿ ಇನ್ನಷ್ಟು ವೇಗದ ಪ್ರೊಸಸರ್ ನೀಡಲಿದ್ದು, 2ಜಿಬಿ ನೀಡಲೂ ನಿರ್ಧರಿಸಿದೆ. ಇದರೊಂದಿಗೆ 12ಮೆಗಾಪಿಕ್ಸೆಲ್ ಕ್ಯಾಮರಾ, ಫಾ್ಯಶ್ ಇರುವ 5ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಹಾಗೂ 4ಕೆ ರೆಸಲೂಶನ್ ವಿಡಿಯೋ ಸೆರೆಹಿಡಿಯುವ ಸಾಮಥ್ರ್ಯ ಹೊಸ ಫೋನ್‍ಗೆ ನೀಡಲಾಗುತ್ತಿದೆ. ಬಣ್ಣದಲ್ಲೂ ಹೊಸತನ: ಕೆಲವೇ ಕಲರ್ ಗಳ ಆ್ಯಪಲ್ ಫೋನ್ ನೋಡಿದ್ದ ಬಳಕೆದಾರರಿಗೆ ಈಬಾರಿ ಬಿಳಿ, ಕಪ್ಪು, ಮಾತ್ರವಲ್ಲದೇ ರೋಸ್ ಗೋಲ್ಡ್ ಬಣ್ಣದ ಹೊರಮೈ ನೀಡಲಿದೆ. ಆ್ಯಪಲ್ ವಾಚ್ ಬಳಸುತ್ತಿದ್ದವರಿಗೆ ಇದು ಪರಿಚಿತ ಬಣ್ಣ. ಐಫೋನ್ 6ಎಸ್ ಜೊತೆ 6ಎಸ್ ಪ್ಲಸ್ ವಿನ್ಯಾಸ ಹಳೆಯ ಐಫೋನ್‍ಗಳಂತೆಯೇ ಇರುತ್ತದಾದರೂ, ಕೆಲವು ಹೊಸ ಬಿಡಿಭಾಗಗಳು ಮೊಬೈಲೊಳಗೆ ಸೇರಲಿರುವುದರಿಂದ 6ಎಸ್ ಸ್ವಲ್ಪ ದಪ್ಪ ಇರಲಿದೆ. ಇದು ಹೆಚ್ಚು ಗಟ್ಟಿತನದ್ದಾಗಿರುತ್ತದೆಂದೂ ಹೇಳಲಾಗಿದೆ. ಫೋರ್ಸ್‍ಟಚ್-ಡೀಪ್ ಪ್ರೆಸ್: ಪ್ರೆಶರ್ ಸೆನ್ಸಿಟಿವಿಟಿ ಎಂಬ ತಂತ್ರಜ್ಞಾನ ಬಳಸಿರುವ ಫೋರ್ಸ್ ಟಚ್ ಎಂಬ ಹೊಸ ಫೀಚರ್ 6ಎಸ್‍ನಲ್ಲಿ ಬರಲಿದೆ. ಈ ಮೊದಲು ಆ್ಯಪಲ್ ವಾಚ್‍ನಲ್ಲಿ ತರಲಾಗಿದ್ದ ಈ ವೈಶಿಷ್ಟ್ಯ ಫೋನ್ ಗೂ ಹಬ್ಬಿದೆ. ನೀವು ಸ್ಕ್ರೀನ್ ಮೇಲೆ ಬೆರಳಿನಿಂದ ಎಷ್ಟು ಒತ್ತಡ ಹೇರುತ್ತೀರಿ ಎಂಬ ಆಧಾರದ ಮೇಲೆ ಮೊಬೈಲ್ ಅಗತ್ಯದ ಸಿಗ್ನಲ್ಗಳಿಗೆ ಸ್ಪಂದಿಸುತ್ತವೆ. ಗೇಮï ಆಡುವವರಿಗೆ ಫೋರ್ಸ್ ಟಚ್‍ನ ವಿವಿಧೋಪಯೋಗ ಹೆಚ್ಚು ಅರಿವಿಗೆ ಬರುತ್ತದೆ. ಈ ವೈಶಿಷ್ಟ್ಯಕ್ಕೋಸ್ಕರವೇ 6ಎಸ್‍ಗೆ ಡೀಪ್ ಪ್ರೆಸ್ ಎಂಬ ಹೆಸರು ನೀಡುವ ಪ್ರಸ್ತಾವವೂ ಇದೆ. ಆ್ಯಪಲ್ ಟಿವಿ: ಇದುವರೆಗೆ ಟ್ಯಾಬ್ಸೈಜಿನಲ್ಲಿದ್ದ ಐಪ್ಯಾಡ್ ಈಗ ದೊಡ್ಡ ಟಿವಿಯಾಗಿ ಬರುತ್ತಿದ್ದು, ಬಹುಶಃ ಸಾಮಾನ್ಯ ಟಿವಿಗಳನ್ನು ಪಲ್ಲಟಗೊಳಿಸಿದರೂ ಚ್ಚರಿಬೇಡ. ಇದಕ್ಕಾಗಿಯೇ ಆ್ಯಪ್ ಸ್ಟೋರ್ಸ್‍ನಲ್ಲಿ ಹೊಸ ಅಪ್ಲಿಕೇಶನ್ ಕೂಡ ನೀಡಲಾಗುತ್ತಿದೆ. ಗೇಮಿಂಗ್ ಮತ್ತು ವಿಡಿಯೋ ಸೇವೆಗಳನ್ನು ಮನದಲ್ಲಿಟ್ಟುಕೊಂಡೇ ಆ್ಯಪಲ್ ಟಿವಿ ಸಿದ್ಧವಾಗಿದೆ. ಐಪ್ಯಾಡ್ ಪ್ರೊ, ಐಪ್ಯಾಡ್ ಮಿನಿ 4, ಹೊಸ ಆ್ಯಪಲ್ ವಾಚ್ ಕೂಡ ಇದೇ ಸಮಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆ ನಡೆದಿದೆ.