ಆ್ಯಂಡ್ರಾಯ್ಡ್ ಫಸ್ಟ್ ಗೂಗಲ್ ಕಂಪನಿಯ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಜಗತ್ತಿನಾದ್ಯಂತ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಸಾಫ್ಟ್‌ವೇರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರಂಭದಲ್ಲಿ ಆ್ಯಪಲ್ ಕಂಪನಿಗೆ ಭಾರಿ ಪೈಪೋಟಿ ನೀಡಿದ್ದ ಆ್ಯಂಡ್ರಾಯ್ಡ್ ಈಗ ಆ್ಯಪಲ್ ಆಪರೇಟಿಂಗ್ ಸಿಸ್ಟಂ(ಐಒಎಸ್) ಬಳಕೆದಾರರ ಸಂಖ್ಯೆಯನ್ನು ಹಿಂದಿಕ್ಕಿ ಮುನ್ನಡೆದಿದೆ. ವಿಶ್ವದಾದ್ಯಂತ ಶೇ.80ರಷ್ಟು ಸ್ಮಾರ್ಟ್‌ಫೋನ್‌ಗಳನ್ನು ಆ್ಯಂಡ್ರಾಯ್ಡ್ ಆವರಿಸಿಕೊಂಡಿದೆ. ಉಳಿದ ಶೇ.20ರಷ್ಟನ್ನು ಆ್ಯಪಲ್, ವಿಂಡೋಸ್ ಮತ್ತು ಸಿಂಬಿಯನ್ ಆಪರೇಟಿಂಗ್ ಸಿಸ್ಟಂಗಳು ಹಂಚಿಕೊಂಡಿವೆ. ಆ್ಯಪಲ್ ಆಪರೇಟಿಂಗ್ ಸಿಸ್ಟಂ ಪಾಲು ಶೇ.14ರಷ್ಟಾದರೆ, ವಿಂಡೋಸ್ ಪಾಲು ಶೇ.4ರಷ್ಟು ಮಾತ್ರ!