ಭಾರತದಲ್ಲಿ ಕಡಿತಗೊಂಡ ಎಚ್ ಟಿಸಿ-10 ಸ್ಮಾರ್ಟ್ ಫೋನ್ ದರ ತೈವಾನ್ ಮೂಲದ ಎಚ್‍ಟಿಸಿ ಕಂಪೆನಿಯ ಎಚ್‍ಟಿಸಿ -10 ಮೊಬೈಲ್ ಬೆಲೆ ಕಡಿಮೆಯಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ 52,990 ರೂ. ಬೆಲೆಗೆ ಬಿಡುಗಡೆಯಾಗಿದ್ದ ... ದೆಹಲಿ: ತೈವಾನ್ ಮೂಲದ ಎಚ್‍ಟಿಸಿ ಕಂಪೆನಿಯ ಎಚ್‍ಟಿಸಿ -10 ಮೊಬೈಲ್ ಬೆಲೆ ಕಡಿಮೆಯಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ 52,990 ರೂ. ಬೆಲೆಗೆ ಬಿಡುಗಡೆಯಾಗಿದ್ದ ಫೋನ್ ಬೆಲೆ 5 ಸಾವಿರ ರೂ. ಕಡಿಮೆಯಾಗಿದೆ. ಇದರಿಂದಾಗಿ ಈಗ ಈ ಫೋನ್ 47,990 ರೂ. ನಿಗದಿಯಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಫೋನ್ ದರ ಕಡಿತಗೊಂಡಿದ್ದು, ಎಷ್ಟು ದಿನದವರೆಗೆ ದರ ಕಡಿತ ಇರುತ್ತದೆ ಎನ್ನುವ ಮಾಹಿತಿಯನ್ನು ಕಂಪೆನಿ ನೀಡಿಲ್ಲ. ಈ ಫೋನಿಗೆ ಎಚ್‍ಟಿಸಿ ಆಂಡ್ರಾಯ್ಡ್ ನೂಗಟ್ ಓಎಸ್ ಅಪ್‍ಡೇಟ್ ನೀಡಿದೆ. ನ್ಯಾನೋ ಸಿಂಗಲ್ ಸಿಮ್, 5.2 ಇಂಚಿನ ಸೂಪರ್ ಎಲ್‍ಸಿಡಿ ಸ್ಕ್ರೀನ್(1440*2560 ಪಿಕ್ಸೆಲ್, 565 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3), ಆಂಡ್ರಾಯ್ಡ್ ಮಾರ್ಶ್‍ಮೆಲೊ ಓಎಸ್, ಕ್ವಾಲಕಂ ಕ್ವಾಡ್‍ಕೋರ್ ಪ್ರೊಸೆಸರ್ ಹೊಂದಿದೆ.