ಭಾರತೀಯ- ಅಮೆರಿಕನ್ ಪ್ರಾರಂಭಿಸಿದ್ದ ಮೆಸೆಜಿಂಗ್ ಆಪ್ ಸ್ಟಾರ್ಟ್ ಅಪ್ ಮೈಕ್ರೋ ಸಾಫ್ಟ್ ಪಾಲು ಭಾರತೀಯ ಸಂಜಾತ ಅಮೆರಿಕನ್ ಪ್ರಜೆ ವಿಶಾಲ್ ಶರ್ಮಾ ಅವರ ಮೆಸೆಜಿಂಗ್ ಆಪ್ ಸ್ಟಾರ್ಟ್ ಅಪ್( ಸಂಸ್ಥೆ) ಯನ್ನು ಮೈಕ್ರೋಸಾಫ್ಟ್ ಖರೀದಿಸಿದೆ. ನ್ಯೂಯಾರ್ಕ್: ಭಾರತೀಯ ಸಂಜಾತ ಅಮೆರಿಕನ್ ಪ್ರಜೆ ವಿಶಾಲ್ ಶರ್ಮಾ ಅವರ ಮೆಸೆಜಿಂಗ್ ಆಪ್ ಸ್ಟಾರ್ಟ್ ಅಪ್( ಸಂಸ್ಥೆ) ಯನ್ನು ಮೈಕ್ರೋಸಾಫ್ಟ್ ಖರೀದಿಸಿದೆ. ಕೃತಕ ಬುದ್ಧಿಮತ್ತೆ ಉಪಯೋಗಿಸಿ, ಸಂವಹನ ನಡೆಸುವ ಆಪ್ ಸಂಸ್ಥೆಯನ್ನು ಮೈಕ್ರೋ ಸಾಫ್ಟ್ ಸಂಸ್ಥೆ ಖರೀದಿಸಿದೆ. ವಾಂಡ್ ಲಾಬ್ಸ್ ಆಪ್ ಗಳಿಗೆ ಮೆಸೆಜಿಂಗ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಸ್ಥೆಯಾಗಿದ್ದು, ಇದನ್ನು ಐಐಟಿ ದೆಹಲಿಯ ಪದವೀಧರ ವಿಶಾಲ್ ಶರ್ಮಾ ಪ್ರಾರಂಭಿಸಿದ್ದರು. ಮೈಕ್ರೋಸಾಫ್ಟ್ ನೊಂದಿಗೆ ವಾಂಡ್ ಲ್ಯಾಬ್ಸ್ ಸಂಸ್ಥೆಯ ವಿಲೀನ, ಸಂವಹನ ಕ್ಷೇತ್ರದಲ್ಲಿ ನಮ್ಮ ಕಾರ್ಯತಂತ್ರಕ್ಕೆ ಮತ್ತಷ್ಟು ವೇಗ ನೀಡಲಿದೆ ಎಂದು ಮೈಕ್ರೋ ಸಾಫ್ಟ್ ನ ಮಾಹಿತಿ ವೇದಿಕೆ ಗ್ರೂಪ್ ನ ಕಾರ್ಪೊರೇಟ್ ಉಪಾಧ್ಯಕ್ಷ ಡೇವಿಡ್ ಕು ಬ್ಲಾಗ್ ನಲ್ಲಿ ಹೇಳಿದ್ದಾರೆ. ವಾಂಡ್ ಲ್ಯಾಬ್ಸ್ ನ ತಂತ್ರಜ್ಞಾನ ಹಾಗೂ ಪ್ರತಿಭೆಗಳು, ಮುಂಬರುವ ದಿನಗಳಲ್ಲಿ ಸಂವಹನ ಕ್ಷೆತ್ರದಲ್ಲಿ ಮೈಕ್ರೋಸಾಫ್ಟ್ ನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಮಾನವ ಸಂಭಾಷಣೆ ಹಾಗೂ ಯಂತ್ರಗಳ ಬುದ್ಧಿಮತ್ತೆಯನ್ನು ಬೆಸೆಯುವುದರಲ್ಲಿ ಭಾಗಿಯಾಗಲಿದ್ದಾರೆ ಎಂದು ಡೇವಿಡ್ ಕುಕ್ ಬ್ಲಾಗ್ ನಲ್ಲಿ ಬರೆದಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥೆ ವಾಂಡ್ ಲ್ಯಾಬ್ಸ್ ನ್ನು ಖರೀದಿಸಿದೆಯಾದರೂ ಅದರ ಸಂಪೂರ್ಣ ನಿಯಮ ಹಾಗೂ ಒಪ್ಪಂದಗಳ ಬಗ್ಗೆ ಮಾಹಿತಿಯನ್ನು ಅಧಿಕೃತವಾಗಿ ಇನ್ನೂ ಬಿಡುಗಡೆ ಮಾಡಿಲ್ಲ.