ಐ ಬಾಲ್‍ನ ಟೂ ಇನ್ ಒನ್ ಗ್ಯಾಜೆಟ್ ಬೆಂಗಳೂರು ಮೂಲದ ನೋಷನ್ ಇಂಕ್ ಸಂಸ್ಥೆಯು ಕೇನ್‍ರ ಎಂಬ ಟೂ ಇನ್ ಒನ್ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ವಿಯಾಗುತ್ತಿದ್ದಂತೆ.. ಬೆಂಗಳೂರು ಮೂಲದ ನೋಷನ್ ಇಂಕ್ ಸಂಸ್ಥೆಯು ಕೇನ್‍ರ ಎಂಬ ಟೂ ಇನ್ ಒನ್ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ವಿಯಾಗುತ್ತಿದ್ದಂತೆ ಇನ್ನು ಕೆಲ ಕಂಪನಿಗಳು ಈ ಉತ್ಪನ್ನದತ್ತ ಕಣ್ಣು ಹಾಕಲು ಆರಂಭಿಸಿವೆ. ಟೂ ಇನ್ ಒನ್ ಲ್ಯಾಪ್‍ಟಾಪ್ ಕಮ್ ಟ್ಯಾಬ್ಲೆಟ್ ಮಾರುಕಟ್ಟೆಗೆ `ಐ' ಬಾಲ್ ಕಣ್ಣು ಬಿದ್ದಿದೆ. ಬೆಂಗಳೂರು ಮೂಲದ ನೋಷನ್ ಇಂಕ್ ಸಂಸ್ಥೆಯು ಕೇನ್‍ರ ಎಂಬ ಟೂ ಇನ್ ಒನ್ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ವಿಯಾಗುತ್ತಿದ್ದಂತೆ ಇನ್ನು ಕೆಲ ಕಂಪನಿಗಳು ಈ ಉತ್ಪನ್ನದತ್ತ ಕಣ್ಣು ಹಾಕಲು ಆರಂಭಿಸಿವೆ. ಮೊದಲು ಆಸಸ್ ಕಂಪನಿಯು ಇದೇ ಪ್ರಯೋಗ ಮಾಡಿ ಯಶಸ್ವಿಯಾಗಲಿಲ್ಲ. ಕಾರಣ ಆ ಲ್ಯಾಪ್‍ಪಟ್ -ಟ್ಯಾಬ್ಲೆಟ್ ದರವು ನೋಷನ್ ಇಂಕ್ ಕೇನ್ ದರಕ್ಕಿಂತ ರು13 ಸಾವಿರ ಹೆಚ್ಚಾಗಿತ್ತು. ಆದರೆ ಈಗ ಐ ಬಾಲ್ ಕಂಪನಿಯು ಬಹುತೇಕ ಅದೇ ದರಪಟ್ಟಿಯಲ್ಲಿ ಅದೇ ತಾಂತ್ರಿಕ ಕಾನ್ಫಿಗರೇಷನ್ ಹೊಂದಿರುವ ವಿಂಡೋಸ್ ಸ್ಲೈಡ್ ಎಂಬ 2 ಇನ್ 1 ಗ್ಯಾಜೆಟ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ನೋಡಲು ಪಕ್ಕಾ ನೋಷನ್ ಇಂಕ್ ತರಹವೇ ಕಾಣುವ ವಿಂಡೋಸ್ ಸ್ಲೈಡ್ ನೋಷನ್ ಇಂಕ್‍ಗೆ ಭಾರಿ ಪೈಪೋಟಿ ನೀಡುವ ಸಾಧ್ಯತೆಯಿದೆ. ಆನ್ ಲೈನ್ ಮಾರುಕಟ್ಟೆಯಲ್ಲಿ ನೋಷನ್ ಇಂಕ್‍ಗಿಂತ ಒಂದೂವರೆ ಸಾವಿರ ರುಪಾಯಿ ಹೆಚ್ಚಿನ ದರದಲ್ಲಿ ಲಭ್ಯವಾಗುತ್ತಿದೆ. 10.1 ಇಂಚಿನ ಸ್ಕ್ರೀನ್ ಹೊಂದಿದ್ದು ಕೀಪ್ಯಾಡ್ ಅನ್ನು ಸ್ಕ್ರೀನ್‍ನಿಂದ ತೆಗೆಯಬಹುದಾಗಿದೆ. ಬೇಕಾದಾಗ ಕೀಪ್ಯಾಡ್ ಅನ್ನು ಅಟ್ಯಾಚ್ ಮಾಡಿಕೊಂಡು ಬಳಸಬಹುದು. ಈ ಕೀಪ್ಯಾಡ್‍ಗೆ ಟ್ಯಾಬ್ ಕವರ್ ಕೂಡ ಸೇರಿರುವುದರಿಂದ ಹೊಸದಾಗಿ ಟ್ಯಾಬ್‍ಗೆ ಕವರ್ ಖರೀದಿಸುವ ಅಗತ್ಯವೂ ಇಲ್ಲ. ವಿಂಡೋಸ್ 8.1 ಆಪರೇಟಿಂಗ್ ಸಿಸ್ಟಮ್ ಹೊಂದಿರುವ -ಬಾಲ್ ಸ್ಲೈಡ್, 2 ಜಿಬಿ ರ್ಯಾಮ್ ಹಾಗೂ 32 ಜಿಬಿ ಆಂತರಿಕ ಮೆಮೊರಿ ಹೊಂದಿದೆ. 64 ಜಿಬಿವರೆಗೂ ವೃದ್ಧಿಸಿಕೊಳ್ಳಲು ಅವಕಾಶವಿದ್ದು ಹಾರ್ಡ್‍ಡಿಸ್ಕ್‍ಗಳನ್ನು ಯುಎಸ್‍ಬಿ ಪೋರ್ಟ್ ಮೂಲಕವೂ ಬಳಸಿಕೊಳ್ಳಬಹುದು. ಇದರಿಂದ ಟ್ಯಾಬ್‍ನ ಮೆಮೊರಿಯು ಸಮಸ್ಯೆಯಾಗಲಾರದು. ನೋಷನ್ ಇಂಕ್ ಹೊಂದಿದ್ದ ತೂಕವನ್ನೇ ಇದು ಹೊಂದಿದ್ದು, ಕೀಪ್ಯಾಡ್ ಸೇರಿದಂತೆ 639 ಗ್ರಾಂ ಇದೆ. 1.83 ಗಿಗಾ ಹಟ್ರ್ಸ್ ಇರುವ ಇಂಟೆಲ್ ಆ್ಯಟಮ್ ಪ್ರೊಸೆಸರನ್ನು ಸ್ಲೈಡ್ ಒಳಗೊಂಡಿದೆ. ವಿಂಡೋಸ್ ಸ್ಲೈಡ್‍ನ ಕ್ಯಾಮೆರಾವೂ ಕೊಂಚ ಮಟ್ಟಿಗೆ ಸುಧಾರಣೆಯಾಗಿದ್ದು, ಹಿಂಬದಿ ಕ್ಯಾಮೆರಾ 5 ಎಂಪಿ ಹಾಗೂ ಮುಂಬದಿ ಕ್ಯಾಮೆರಾವು 2 ಎಂಪಿ ಇದೆ. ಇದರಿಂದ ಸುಲಭವಾಗಿ ವಿಡಿಯೋ ಚಾಟಿಂಗ್‍ಗೂ ಅವಕಾಶವಿದೆ. ಇನ್ನು ಯುಎಸ್‍ಬಿ ಪೋರ್ಟ್ ಹಾಗೂ ವೈಫೈ ಮೂಲಕ ಅಂತರ್ಜಾಲದ ಸಂಪರ್ಕ ಪಡೆಯಬಹುದಾಗಿದೆ. ಎಂಎಸ್ ಆಫೀಸ್ ಹಾಗೂ 1 ಟಿಬಿ ಕ್ಲೌಡ್ ಸ್ಟೋರೇಜ್ ಕೂಡ ಉಚಿತವಾಗಿಯೇ ಸಿಗಲಿದೆ. ಇದರಿಂದ ಐ ಬಾಲ್ ಸ್ಲೈಡ್ ಕೊಂಚ ಆಕರ್ಷವಾಗಿದೆ ಎನ್ನಬಹುದು. ಈ ಮಾದರಿಯಲ್ಲಿ ಸದ್ಯಕ್ಕೆ ಮೂರು ಉತ್ಪನ್ನಗಳಿವೆಯಷ್ಟೆ. ಆಸಸ್ ಹೊರತಂದಿರುವ 2ಇನ್1 ಲ್ಯಾಪ್‍ಟಾಪ್ ತಾಂತ್ರಿಕವಾಗಿ ಉತ್ತಮವಾಗಿದ್ದರೂ ದರಪಟ್ಟಿಯಲ್ಲಿ ಸಾಕಷ್ಟು ಮುಂದಿದೆ. ಆದರೆ ಐ ಬಾಲ್ ಹಾಗೂ ನೋಷನ್ ಇಂಕ್ ದರದಲ್ಲಿ ಬಹುತೇಕ ತಾಂತ್ರಿಕವಾಗಿ ಒಂದೇ ಥರವಾಗಿದ್ದರೂ ದರದಲ್ಲಿ ಮಾತ್ರ ಕೊಂಚ ಬದಲಾವಣೆ ಹೊಂದಿದೆ. ವಿನ್ಯಾಸವನ್ನು ನೋಡಿದಾಗ ಸ್ಲೈಡ್ ಟ್ಯಾಬ್ ಸ್ಲೈಟ್ ಆಗಿ ಚೆಂದವಾಗಿದೆ. ಕೈನಲ್ಲಿ ಹಿಡಿದುಕೊಳ್ಳಲು ಆಪ್ತವಾಗಿದೆ. ನೋಷನ್ ಇಂಕ್ ತರಹ ಹಿಂಬದಿಯಲ್ಲಿ ಮೆಟಲ್ ಕವರ್‍ನನು ನೀಡಲಾಗಿಲ್ಲ. ಇದರಿಂದ ಬಳಕೆದಾರರಿಗೆ ಇನ್ನಷ್ಟು ಆಪ್ತವೆನಸುತ್ತದೆ. ಇಲ್ಲವಾದರೆ ಜಾಹೀರಾತಿನಲ್ಲಿ ಬಾಲಿವುಡ್ ಸುಂದರಿ ಕರೀನಾ ಕಪೂರ್ ಸ್ಲೈಡ್ ಹಿಡಿದುಕೊಂಡು ಬರುವುದು ಕಾರಣವಾಗಿರಬಹುದು!