ಉಲ್ಕಾ ಪಲ್ಟಿ ನಾವು ಸದ್ದಿಲ್ಲದೇ ಎರಗುವ ಉಲ್ಕಾಪಾತದ ಕರಿನೆರಳಿನಲ್ಲಿ ವಾಸವಿದ್ದೇವಾ? ಹೌದು, ನೈಸರ್ಗಿಕವಾಗಿ ಬರುವ ಎಷ್ಟೋ ಅವಘಡಗಳಲ್ಲಿ ನಾವು ಎಂದೋ ವಿಜ್ಞಾನದ ಕೌತುಕಗಳಲ್ಲಿ ಉಲ್ಕಾಪಾತದ ಕುರಿತು ಓದಿದ್ದೆವು. ಆದರೆ, ಅದು ಹೀಗೆಲ್ಲಾ ಮಾನವ ಸಮೂಹದ ಮೇಲೆ ಎರಗಿ ರಕ್ತಸಿಕ್ತವಾದ ಇತಿಹಾಸ ಬರೆಯುವುದೆಂದು ಮೊನ್ನೆ ರಷ್ಯಾದಲ್ಲಿ ನಡೆದ ಉಲ್ಕಾಪಾತ ಎಚ್ಚರಿಸಿ ಹೋಗಿದೆ. ಅಂದು ಶುಕ್ರವಾರ (ಫೆ.15) ರಷ್ಯಾದಲ್ಲಿ ಏನಾಯಿತು? ಗಂಟೆಗೆ ಬಹುಶಃ ಐವತ್ಕಾಲ್ಕು ಸಾವಿರ ಕಿ.ಮೀನಷ್ಟು ವೇಗದಲ್ಲಿ ಬಂದಿರಬಹುದಾದ ಈ ಉಲ್ಕಾಪಾತ ಹತ್ತು ಟನ್ಗಳಷ್ಟು ಭಾರವಿತ್ತು. ಭೂಮಟ್ಟದಿಂದ ಸುಮಾರು ಮೂವತ್ತರಿಂದ ಐವತ್ತು ಕಿ. ಮಿಗಳಷ್ಟು ಎತ್ತರದಲ್ಲಿ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಸುಮಾರು 900 ಜನ ಗಾಯಗೊಂಡಿದ್ದಾರೆ. ಅದು ಚೂರಾಗಿ ಉಂಟಾದ ಗಾಜುಗಳಿಂದಾಗಿ ಗಾಯಗೊಂಡವರೇ ಹೆಚ್ಚು. ಇದರ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಹೊರಟ ವಿಜ್ಞಾನಿಗಳಿಗೆ ಉಲ್ಕೆಯ ಚೂರುಗಳು ಸಾವಿರಾರು ಕಿ.ಮಿಗಳಲ್ಲಿ ಹರಡಿರುವುದು ಕಂಡುಬಂದಿದೆ. ಉಲ್ಕೆಯೋ, ಧೂಮವೋ? ವಿಚಿತ್ರ ಕಾಕತಾಳೀಯ ಎಂಬಂತೆ, ಒಂದು ಉಲ್ಕಾಪಾತ ಚೆಲೈಯಬಿಸಿಕ್ ಎಂಬಲ್ಲಿ ಭೂಮಿಗೆ ಬಡಿದು ನಾಶವಾದರೆ, ಇನ್ನೊಂದು ಅನಾಮಿಕವಾಗಿ ಸಮುದ್ರಕ್ಕೆ ಬಿದ್ದಿದೆ. ಕಕ್ಷೆಯಲ್ಲಿ ಇದೇ ಉಲ್ಕಾಪಾತದ ಉಳಿಕೆಗಳು ಇದ್ದಲ್ಲಿ ಅವು ಸಹ ಭೂಮಿಯನ್ನು ಇದೇ ರೀತಿಯಲ್ಲಿ ಬಡಿಯಬಹುದು. ಆದರೆ ಅವುಗಳ ವೇಗದಲ್ಲಿ ಇಳಿಕೆ ಉಂಟಾಗುತ್ತದೆ ಎಂಬು ಭೌತ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸಾವು ಸಂಭವವೇ? ಭೂಮಿಯ ಮೇಲೆ ಸಾವು-ನೋವು ಉಂಟು ಮಾಡುವುದು ಉಲ್ಕಾಪಾತಗಳಿಂದ ವಿರಳವಾಗಿ ಆಗುವ ಕೆಲಸ. ಇದೇ ರೀತಿಯ ಉಲ್ಕೆಯೊಂದು ಡೈನೋಸಾರ್ ಅನ್ನು ಅಂತ್ಯಗೊಳಿಸಿತ್ತು. ಮುಂದೆ ಜನರಿಗೆ ಹೀಗೆ ಅಚಾನಕ್ ಉಲ್ಕೆಯೊಂದು ಭೂಮಿಗೆ ಬಡಿದು ನಮ್ಮ ಜೀವಕ್ಕೆ, ನೆಲಕ್ಕೆ ಹಾನಿ ಉಂಟುಮಾಡುವುದೆಂಬ ವಾರ್ನಿಂಗ್ ಈಗ ಬಂದಾಗಿದೆ. ಅತ್ಯಂತ ಜನಸಾಂದ್ರತೆ ಹೊಂದಿರುವ ಜನರು ದೂರ ದೂರಕ್ಕೆ ಸಾಗಲು ಅವಕಾಶ ಪಡೆದರೆ ಇಂಥ ಅಪಾಯಗಳಿಂದ ಹೊರಗುಳಿಯಬಹುದು. 1911ರಲ್ಲಿ ಈಜಿಪ್ತ್ನಲ್ಲೊಂದು ನಾಯಿಯು ಉಲ್ಕಾಪಾತದಿಂದಾಗಿ ಸತ್ತಿದ್ದು ವರದಿಯಾಗಿತ್ತು. 1992ರಲ್ಲಿ ಒಬ್ಬ ಹುಡುಗ ಇದರಿಂದ ಗಾಯಗೊಂಡಿದ್ದ, ಆದರೆ ಗಂಭೀರವಾಗಿ ಸಮಸ್ಯೆಗಳಾಗಿರಲಿಲ್ಲ. ಎಷ್ಟು ವರ್ಷಕ್ಕೊಮ್ಮೆ? ಇದು ನೂರು ವರ್ಷಕ್ಕೆ ಒಮ್ಮೆಯೂ ಆಗಬಹುದು. ಹತ್ತು ಹಲವು ದಶಲಕ್ಷ ವರ್ಷಗಳಲ್ಲಿ ಸಹ ಆಗಬಹುದು, ಈ ಹಿಂದೆ 1908ರಲ್ಲಿ ಸೈಬಿರಿಯಾದ ತಂಗುಸ್ಕಾ ಪ್ರಾಂತ್ಯದಲ್ಲಿ ನಡೆದಿತ್ತು. ಸುಮಾರು 40,000 ಟನ್ಗಳಷ್ಟು ಆಕಾಶಕಾಯಗಳ ಕಲ್ಲುಗಳು ಧೂಳಿನ ರೂಪದಲ್ಲಿ ಪ್ರತಿವರ್ಷ ಭೂಮಿಯ ಮೇಲೆ ಬೀಳುತ್ತವೆ. ಆದರೆ ಉಲ್ಕಾಪಾತಗಳು ಸಾಮಾನ್ಯವಾಗಿ ಜರುಗುವುದು ಸಮುದ್ರ ಅಥವಾ ಜನದಟ್ಟಣೆ ಇರದ ಸ್ಥಳದಲ್ಲಿ. ಉಲ್ಕಾಪಾತವಾದಾಗ ಏನೇನಾಗುತ್ತದೆ? ಉಲ್ಕೆಯು ಭೂಮಿಗೆ ಎರಗಿದ ಕೂಡಲೇ ದೊಡ್ಡದಾದ ಸದ್ದು ಬರುತ್ತದೆ, ಧೂಳಿನ ಕಣಗಳು ಮೇಲೇಳುತ್ತವೆ, ದೊಡ್ಡದಾದ ಬೆಂಕಿ ಏಳುತ್ತದೆ. ಷಾಕ್ವೇವ್ಗಳು (ಅಲೆಗಳು) ಬಿಡುಗಡೆಯಾಗುತ್ತವೆ. ಸ್ಫೋಟ ಕೇಳಿಬರುತ್ತದೆ. ಗಾಜು ಪುಡಿಯಾಗುತ್ತದೆ. ಬಾಗಿಲುಗಳು ಸದ್ದಿಗೆ ಬಡಿದುಕೊಳ್ಳುತ್ತದೆ. ಇದರಿಂದ ಟಿವಿ ಸಿಗ್ನಲ್ಗಳಲ್ಲಿ ತೊಂದರೆ ಕಾಣಿಸಬಹುದು. ಸ್ಯಾಟಲೈಟ್ ಟವರ್ ಮತ್ತು ಟಿವಿ ಮುಂತಾದವುಗಳಿಂದ ಕಕ್ಷೆಯ ಮತ್ತು ಭೂಮಿಯ ವೈಪರೀತ್ಯಗಳ ಮತ್ತು ಟೆಲಿಕಮ್ಯೂನಿಕೇಷನ್ ಮಾಹಿತಿ ಬಾರದೆ ಹೋಗಬಹುದು. ವಿಜ್ಞಾನಿಗಳ ಪ್ರಕಾರ ಉಲ್ಕೆಗಳು ಭೂಮಿಗೆ ಎರಗುವ ಸಾಧ್ಯತೆಗಳು ಕಡಿಮೆಯೇ. ಹಾಗೇನಾದರೂ ಆದಲ್ಲಿ, ಅದರ ಪ್ರಭಾವವು ಹಿರೋಶಿಮಾದ ಮೇಲೆ ಬಾಂಬ್ ಬಿದ್ದ ಸಾವಿರ ಪಟ್ಟು ಅಧಿಕ ಪ್ರಮಾಣದಲ್ಲಿರುತ್ತದೆ ಎಂದಿದ್ದಾರೆ. ಉಲ್ಕಾಪಾತದ ಪ್ರಭಾವಗಳು ಜಾಗತಿಕ ಪ್ರಭಾವಲ್ಲದೇ ಇದ್ದರೂ ತೀವ್ರತರ ಪ್ರಭಾವವಾಗಿದೆ. ಹಾಲಿವುಡ್ ಸಿನಿಮಾಗಳಂತೆ ಬರುವ ಉಲ್ಕೆಯನ್ನು ಗಾಳಿಯಿಂದ ಊದುವ ಮಾನವ ಪ್ರಯತ್ನಗಳ ಪ್ರಯೋಗ ತಜ್ನರಿಂದಲೇ ಫಲಕಾರಿಯಾಗಲಿಲ್ಲ. ಮೊನ್ನೆಯ ಪ್ರಭಾವಗಳು ಭೂಮಿಯ ಚಲನೆಗೆ ಮತ್ತು ಟೆಲಿಕಮ್ಯೂನಿಕೇಶನ್ ಟವರ್ಗಳು ಮೇಲೆ ಯಾವುದೇ ಷಾಕ್ವೇವ್ಗಳು ಬಡಿದಿಲ್ಲ. ಸಾಮಾನ್ಯವಾಗಿ ಉಲ್ಕೆಗಳು ಸಮುದ್ರಕ್ಕೆ ಅಥವಾ ಭೂಮಿಗೆ ಬಂದು ಬೀಳುತ್ತದೆ. ಇದುವರೆಗೆ ಯಾವುದೇ ಸ್ಪೇಸ್ಬಗ್ (ಆಕಾಶ ಕೀಟಗಳು) ತಂದಿಲ್ಲ. ಡೈನೋಸಾರ್ ಅಂತ್ಯಗೊಳಿಸಿದ್ದು ಉಲ್ಕೆಯೇ? ಹೊಸ ಸಂಶೋಧನೆಯೊಂದು ಮೆಕ್ಸಿಕೋದಲ್ಲಿ ಈ ವಿಚಾರವನ್ನು ಸಾಬೀತುಪಡಿಸಲು ಸಿದ್ಧವಾಗಿದೆ. ಹಿಂದೊಮ್ಮೆ ಅದು ಡೈನೋಗಳ ಸಾಮ್ರಾಜ್ಯವಿರುವ ಪ್ರದೇಶವಾಗಿತ್ತು. ಅದನ್ನು ಕೆ- ಎಂದು ಕರೆಯುತ್ತಾರೆ. ಆಗ ಡೈನೋಸಾರ್ಗಳಲ್ಲಿ ಉಳಿದ ಜೀವಿಗಳೆಂದರೆ ಹಕ್ಕಿಗಳು. ನಾಗಸಾಕಿ-ಹಿರೋಶಿಮಾದ ಅಣುಬಾಂಬ್ ಸ್ಫೋಟಕ್ಕಿಂತ ಒಂದು ಬಿಲಿಯನ್ನಷ್ಟು ಅಧಿಕವಿದ್ದ ಸ್ಫೋಟವೇ ಆ ಪ್ರಾಂತ್ಯದೊಂದಿಗೆ ಅಲ್ಲಿದ್ದ ಜೀವಿಗಳಾದ ಡೈನೋಸಾರ್ಗಳನ್ನು ಸರ್ವನಾಶ ಮಾಡಿತು ಎಂದು ಸಂಶೋಧನೆಗಳು ಸಾಧಿಸಿದೆ. ಭಾರತಕ್ಕೂ ಉಲ್ಕೆಗಳಿಂದ ಅಪಾಯ! ಹೌದು. ಭಾರತಕ್ಕೆ ಉಲ್ಕೆಗಳಿಂದ ಅಪಾಯ ಸ್ಪಷ್ಟವಾಗಿಯೇ ಇದೆ. ಮುಂಬರುವ ದಿನಗಳಲ್ಲಿ ಉಲ್ಕೆಗಳು ಯಾವ ದಿಕ್ಕಿನಲ್ಲಿ ಬೇಕಾದರೂ ಅಪ್ಪಳಿಸಬಹುದು. ಜತೆಗೆ, ಭೂಮಿಯು ದಿನವೂ ತನ್ನ ಕಕ್ಷೆಯ ಮೇಲೆ ತಿರುಗುತ್ತಿರುತ್ತದೆ. ಅಪಾಯ ಕಕ್ಷೆಯ ಯಾವ ದಿಕ್ಕಿನಲ್ಲಿ ಬೇಕಾದರೂ ಸೃಷ್ಟಿಯಾಗಬಹುದು. ತಜ್ಞರು ಸಣ್ಣ ಉಲ್ಕೆಗಳು ಸಂಭವಿಸಬಹುದಾದ ಭೂಭಾಗಗಳನ್ನು (3,280 ಅಡಿ ಇರುವ ಡಯಾಮೀಟರ್ನಿಂದ ಯಾವ ದೇಶಗಳಲ್ಲಿ ಬರಬಹುದೆಂದು) ಅಂದಾಜು ಮಾಡಿದ್ದಾರೆ. ಅದರಲ್ಲಿ ಭಾರತದ ಭೂಭಾಗಳೂ ಸೇರಿದೆ. ಹೆಚ್ಚಿನ ಆತಂಕ ಎದುರಿಸುವ ಪ್ರದೇಶಗಳೆಂದರೆ ಭೂಪ್ರದೇಶದ ಮೇಲೆ ಬಂಡೆಗಳನ್ನು ಹೊಂದಿರುವ ಪ್ರದೇಶಗಳು. ಇದೇ ತಂತ್ರಜ್ನಾನವನ್ನು ಉಪಯೋಗಿಸಿ, ಮಾಡಿದ ಪಟ್ಟಿಯಲ್ಲಿ ಭಾರತ ಅಮೆರಿಕ, ಚೀನಾದ ನಂತರದ ಮೂರನೇ ಸ್ಥಾನವನ್ನು ಹೊಂದಿದೆ. ಇಲ್ಲಿ ದೊಡ್ಡ ವಿಪತ್ತುಗಳು ಜರುಗಬಹುದೆಂಬ ಸೂಚನೆಗಳು ಬರುತ್ತಿದೆ. ಮಾನವ ಜನಾಂಗ ಎದುರಿಸುತ್ತಿರುವ ಅತಿದೊಡ್ಡ ನೈಸರ್ಗಿಕ ಅಪಾಯವೆಂದರೆ ಉಲ್ಕಾಪಾತಗಳು ಭೂಮಿಗೆರಗುವುದೇ ಆಗಿದೆ. ಇದು ಭೂಮಿಗೆ ಇರುವ ದೊಡ್ಡ ಭೀತಿ ಕೂಡಾ ಆಗಿದೆ! - ನಳಿನ ಡಿ.