ಟ್ರಾಯ್ ಮಾಡಿ! ನೀವು ಹೊಸ ಸಿಮ್ ಖರೀದಿಸಿದ್ದೀರಾ...? ನಿಮಗೆ ಸಿಮ್ ಜತೆಗೆ ಸ್ಪಾರ್ಟ್ ಅಪ್ ಕಿಟ್ ನೀಡಿದ್ದಾರೆಯೇ? ಪರಿಶೀಲಿಸಿಕೊಳ್ಳಿ. ಇಲ್ಲವಾದರೆ ಕೇಳಿ ಪಡೆದುಕೊಳ್ಳಿ. ಇದು ನಿಮ್ಮ ಹಕ್ಕು. ಸರ್ವಿಸ್ ಪ್ರೊವೈಡರ್ ಅಥವಾ ಅವರ ಅಧಿಕೃತ ಮಾರಾಟಗಾರರಿಂದ ನೀವು ಸ್ಪಾರ್ಟ್ ಅಪ್ ಕಿಟ್ ಪಡೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ನೀವು ತೆಗೆದುಕೊಂಡಿರುವ ಸಿಮ್ ಸಂಖ್ಯೆ, ಮೊಬಲ್ ಸಂಖ್ಯೆ, ಸಂಪರ್ಕದ ಕುರಿತಾಗಿ ಮಾಹಿತಿ, ಗ್ರಾಹಕರ ಸೇವಾಸಂಖ್ಯೆಯನ್ನು ಈ ಕಿಟ್ ಒಳಗೊಂಡಿರುತ್ತದೆ. ಸಿಕ್ಕಸಿಕ್ಕ ಕಡೆ ಸಿಮ್ ತೆಗೆದುಕೊಂಡು ನೀವು ಮಾಡದ ಕೆಲವು ಅಪರಾಧ ಕೃತ್ಯಗಳಿಗೆ ನೀವು ಬಲಿಯಾಗುವುದನ್ನು ಇದು ತಪ್ಪಿಸುತ್ತದೆ. ಸಿಮ್ ಖರೀದಿಸುವ ಪ್ರತಿಯೊಬ್ಬ ಗ್ರಾಹಕ ತಿಳಿದುಕೊಳ್ಳಲೇಬೇಕಾದ ಇಂಥ ಕೆಲವು ಅಂಶಗಳು ಮತ್ತು ಜವಾಬ್ದಾರಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ) ಇದೇ ಮೊದಲ ಬಾರಿಗೆ ದೂರಸಂಪರ್ಕ ಗ್ರಾಹಕರ ಕೈಪಿಡಿ ಬಿಡುಗಡೆ ಮಾಡಿದೆ. ವೋಚರ್ ಪಡೆದುಕೊಳ್ಳಿ ದೂರಸಂಪರ್ಕ ಸೇವೆಗಳನ್ನು ಪಡೆಯಲಿಚ್ಛಿಸುವ ಗ್ರಾಹಕರು ತಮಗೆ ಬೇಕಾದ ವೋಚರ್‌ಗಳನ್ನು ಪ್ರತ್ಯೇಕವಾಗಿ ಕೊಳ್ಳಬೇಕಾಗುತ್ತದೆ. ಸರ್ವಿಸ್ ಪ್ರೊವೈಡರ್ ನಾಲ್ಕು ರೀತಿಯ ವೋಚರ್‌ಗಳನ್ನು ನೀಡುತ್ತಾರೆ. ಪ್ಲಾನ್ ವೋಚರ್, ಟಾಪ್ ಆಪ್ ವೋಚರ್, ವಿಶೇಷ ಟ್ಯಾರಿಫ್ ವೋಚರ್, ಕಾಂಬೋ ವೋಚರ್. ಪ್ಲಾನ್ ವೋಚರ್ ಅನ್ನು ಟ್ಯಾರಿಫ್ ಪ್ಲಾನ್ ನೋಂದಾಯಿಸುವಾಗ ಬಳಸಲಾಗುತ್ತದೆ. ಇದಕ್ಕೆ ಯಾವುದೇ ಹಣದ ಮೌಲ್ಯ ದೊರೆಯುವುದಿಲ್ಲ. ದೂರಸಂಪರ್ಕ ಗ್ರಾಹಕರ ನಿಧಿ ದೂರಸಂಪರ್ಕ ಗ್ರಾಹಕರ ಶಿಕ್ಷಣ ಮತ್ತು ಸಂರಕ್ಷಣ ನಿಧಿ ಗ್ರಾಹಕರ ಶಿಕ್ಷಣ ಕಾರ್ಯಕ್ರಮಗಳಿಗೆ ಹಣಕಾಸಿನ ನೆರವು ಒದಗಿಸುತ್ತದೆ. ನಿಧಿ ಸ್ಥಾಪನೆ ಮಾಡಿರುವ ವಿಧಾನ ಓದಿದರೆ ನಿಮಗೆ ಆಶ್ಚರ್ಯ ಎನ್ನಿಸಬಹುದು. ಪ್ರಾಧಿಕಾರ ಕಾಲಕಾಲಕ್ಕೆ ನೀಡಿರುವ ಹಲವಾರು ನಿರ್ದೇಶನಗಳು ಮತ್ತು ಆದೇಶಗಳಡಿ ಗಮನಾರ್ಹ ಮೊತ್ತದ ಹಣ ಹಿಂತಿರುಗಿಸಬೇಕಾಗಿರುತ್ತದೆ. ಕಾರಣಾಂತರಗಳಿಂದ ಸೇವೆ ಪೂರೈಸುವ ಮತ್ತು ಸಂಸ್ಥೆಗಳಿಂದ ಹಣ ಹಿಂತಿರುಗಿಸಲು ಸಾಧ್ಯವಾಗದೇ ಇದ್ದಾಗ ಸೇವೆ ಪೂರೈಸುವ ಸಂಸ್ಥೆಗಳು ಗ್ರಾಹಕರಿಗೆ ಸೇರಿದ ಈ ಹಣವನ್ನು ಉಳಿಸಿಕೊಳ್ಳುವುದು ಅನುಚಿತ ಮತ್ತು ನ್ಯಾಯ ಸಮ್ಮತವಾಗಿರುವುದಿ. ಆದ್ದರಿಂದ ಇಂತಹ ಹಣವನ್ನು ಪ್ರಾಧಿಕಾರ ವಶಪಡಿಸಿಕೊಂಡು ನಿಧಿ ಸ್ಥಾಪಿಸಿದೆ. ನಿಧಿ ಕಾರ್ಯಕ್ರಮಗಳು ದೂರಸಂಪರ್ಕ ಸೇವೆಗಳ ಗ್ರಾಹಕರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಅಥವಾ ಪ್ರಾಧಿಕಾರ ಕೈಗೊಳ್ಳುವ ಹಲವಾರು ಕ್ರಮಗಳ ಬಗ್ಗೆ ದೂರಸಂಪರ್ಕ ಸೇವೆಗಳ ಗ್ರಾಹಕರಿಗೆ ಶಿಕ್ಷಣ ನೀಡುವುದು. ದೂರಸಂಪರ್ಕ ಸೇವೆಗಳ ಗ್ರಾಹಕರ ಹಿತರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನೇರವಾಗಿ ಅಥವಾ ಪರಿಣಿತ ಸಂಸ್ಥೆಗಳಿಂದ ಅಧ್ಯಯನ ಮತ್ತು ಮಾರುಕಟ್ಟೆಗೆ ಸಂಶೋಧನಾ ಯೋಜನೆ ಕೈಗೊಳ್ಳುವುದು. 4ದೂರಸಂಪರ್ಕ ಕ್ಷೇತ್ರದಲ್ಲಿ ಗ್ರಾಹಕ ಕಲ್ಯಾಣ ಮತ್ತು ಗ್ರಾಹಕ ಶಿಕ್ಷಣದ ಕುರಿತಾಗಿ ವಿಚಾರ ಸಂಕಿರಣ ನಡೆಸುವುದು. ಬಿಲ್ಲಿಂಗ್ ಪ್ರಕಟಣೆ ಟ್ಯಾರಿಫ್ ಯೋಜನೆಯು ಪ್ರಾಧಿಕಾರ ಮಾರ್ಗಸೂಚಿಯಲ್ಲಿರುವಂತೆ ಕಿ1 ಮತ್ತು ಕಿ4 ಕಾಲಂಗಳು ನಿರ್ದೇಶನಗಳ ಪ್ರಕಾರ ವಿವರಣೆಗಳನ್ನೊಳಗೊಂಡಿರುವುದು ಮತ್ತು ಅವಶ್ಯಕತೆಗಳಿಗನುಸಾರವಾಗಿ ಒಂದು ಬಾರಿ ಸಲ್ಲಿಸುವ ಶುಲ್ಕಗಳು, ಉಚಿತ ಕರೆಗಳು, ಎಸ್‌ಎಂಎಸ್, ಸಿಮ್ ವಾಯಿದೆ, ಪಲ್ಸ್ ದರ, ಕರೆಗಳ ದರ, ಸ್ಥಳೀಯ ಕರೆಗಳು, ಎಸ್‌ಟಿಡಿ ಕರೆಗಳು, ರಾಷ್ಟ್ರೀಯ ರೋಮಿಂಗ್ ದರ ಮಾಹಿತಿ ಸೇರಿದಂತೆ ಕೆಲವು ಮಾಹಿತಿಗಳನ್ನು ಸರ್ವಿಸ್ ಪ್ರೊವೈಡರ್ ನೀಡಬೇಕಾಗಿರುತ್ತದೆ. ಶುಲ್ಕ ಏರಿಕೆ ವಿರುದ್ಧ ರಕ್ಷಣೆ ಸರ್ವಿಸ್ ಪ್ರೊವೈಡರ್ ನೀಡಿದ 'ಶುಲ್ಕ ಯೋಜನೆ' (ಟ್ಯಾರಿಫ್ ಪ್ಲಾನ್) ಗ್ರಾಹಕರಿಗೆ ನೋಂದಣಿಯಾದ ದಿನದಿಂದ ಕನಿಷ್ಠ 6 ತಿಂಗಳವರೆಗೆ ಲಭ್ಯವಿರಬೇಕು. ಗ್ರಾಹಕರು ಆರು ತಿಂಗಳ ಅವಧಿಯಲ್ಲಿ ಬೇರೆ ಶುಲ್ಕ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಯೋಜನೆ ಬದಲಾವಣೆಗೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು ಸ್ವೀಕರಿಸುವುದು ಮತ್ತು ಮುಂದಿನ ಬಿಲ್ಲಿಂಗ್ ಅವಧಿಯಿಂದ ಈ ಮನವಿಗಳನ್ನು ಅನುಷ್ಠಾನಗೊಳಿಸುವುದು ಸರ್ವಿಸ್ ಪ್ರೊವೈಡರ್‌ಹೊಣೆ. -ದೇವರಾಜ್ ಎಲ್. @.