ಜು.29ಕ್ಕೆ ವಿಂಡೋಸ್ 10 ಮೈಕ್ರೊಸಾಫ್ಟ್ ಕಂಪನಿ ವಿಂಡೋಸ್ 10 ಆಪರೇಟಿಂಗ್ ಸಾಫ್ಟ್ ವೇರ್ ನ್ನು ಜು.29ರಂದು ಬಿಡುಗಡೆ ಮಾಡಲಿದೆ... ಒಲಾಂಡೊ: ಮೈಕ್ರೊಸಾಫ್ಟ್ ಕಂಪನಿ ವಿಂಡೋಸ್ 10 ಆಪರೇಟಿಂಗ್ ಸಾಫ್ಟ್ ವೇರ್ ನ್ನು ಜು.29ರಂದು ಬಿಡುಗಡೆ ಮಾಡಲಿದೆ. ಕಂಪನಿ ಸಿಇಒ ಭಾರತೀಯ ಮೂಲದ ಸತ್ಯ ನಾದೆಲ್ಲ ಈ ಕುರಿತು ತಿಳಿಸಿದ್ದು, ಬಿಡುಗಡೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು. ಭಾರತದ ಎಲ್ಲ ರಿಟೇಲ್ ಮಳಿಗೆಗಳಲ್ಲೂ ನಾನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ನಾದೆಲ್ಲ ತಿಳಿಸಿದ್ದಾರೆ.