ಏಸರ್‌ಪ್ರೈಸ್ ಏಸರ್ ಸಂಸ್ಥೆ 4ನೇ ಜನರೇಶನ್ ಇಂಟೆಲ್ ಕೋರ್ ಪ್ರೊಸೆಸರ್ ಮೂಲಕ ಹೊಸ 3 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಉತ್ತಮ ಬ್ಯಾಟರಿ, ಹಗುರಾದ ಸಾಧನ, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಎರಡೂ ರೀತಿಯಲ್ಲಿ ಕೆಲಸ ಮಾಡುವ ಕ್ಷಮತೆ ಮತ್ತು ಟಚ್ ಸ್ಕ್ರೀನ್‌ಗಳು ಈ ಹೊಸ ಉತ್ಪನ್ನಗಳ ವೈಶಿಷ್ಟ್ಯ. ಇಂಟೆಲ್‌ನ 4ನೇ ಜನರೇಶನ್ ಕೋರ್ ಪ್ರೊಸೆಸರ್‌ಗಳು ಹೆಚ್ಚು ಒತ್ತಡದ ಕೆಲಸದ ಸಂದರ್ಭಗಳಲ್ಲೂ ಶೇ.50ರಷ್ಟು ಕಡಿಮೆ ಬ್ಯಾಟರಿ ಬಳಸಬಲ್ಲವು. ಇದರಿಂದಾಗಿ ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 13 ಗಂಟೆಗಳ ಬ್ಯಾಟರಿ ಬ್ಯಾಕಪ್ ಸಾಧ್ಯ ಎಂದು ಕಂಪನಿ ಹೇಳಿದೆ. ಏಸರ್ ಆಸ್ಪಾಯರ್, ಪಿ3 ಕನ್ವರ್ಟಿಬಲ್, ಐಕಾನಿಕಾ ಡಬ್ಲ್ಯು3 ಮತ್ತು ಆಸ್ಪಾಯರ್ ಆರ್ 7 ನೋಟ್‌ಬುಕ್ ಇವು ಬಿಡುಗಡೆಯಾದ ಹೊಸ ಉತ್ಪನ್ನಗಳು. ಈ ಪ್ರೊಸೆಸರ್‌ಗಳನ್ನು ಒಳಗೊಂಡಿರುವ ಶೇ.20ರಷ್ಟು ಉತ್ಪನ್ನಗಳನ್ನು ಹೊಂದುವ ಮೂಲಕ ತನ್ನ ಉತ್ಪನ್ನಗಳ ದಾಸ್ತಾವೇಜನ್ನು ಏಸರ್ ವಿಸ್ತರಿಸಿಕೊಳ್ಳುತ್ತಿದೆ. ಟಚ್ ಸ್ಕ್ರೀನ್‌ನ ಅಗತ್ಯ ಮತ್ತು ಅರಿವು ಹೆಚ್ಚಾದಂತೆ ಗ್ರಾಹಕರು ಸುಲಭ ಮತ್ತು ಅನುಕೂಲಕರ ಸೌಲಭ್ಯಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಗ್ರಾಹಕರು ವೆಬ್‌ಬ್ರೌಸಿಂಗ್, ಇಮೇಲ್ ಚೆಕ್ ಮಾಡುವುದು, ಮನರಂಜನೆಯಂಥ ತಮ್ಮ ನಿತ್ಯದ ಕೆಲಸ ಕಾರ್ಯಗಳಿಗಾಗಿ ಟಚ್ ಕೇಂದ್ರಿತ ಕಂಪ್ಯೂಟಿಂಗ್‌ನತ್ತ ಸಾಗುತ್ತಿದ್ದಾರೆ. ಹೊಸ ಮೊಬೈಲ್ ಉತ್ಪನ್ನಗಳ ಶ್ರೇಣಿಯು ಪ್ರಗತಿಶೀಲ ವಿನ್ಯಾಸಗಳ ಮೂಲಕ ಕಂಪ್ಯೂಟಿಂಗ್ ಅನುಭವಕ್ಕೆ ಹೊಸ ಅರ್ಥ ಕಲ್ಪಿಸುವುದು ಕಂಪನಿಯ ಉದ್ದೇಶ. ಹೊಸ ಇಂಟೆಲ್ ಕೋರ್ ಪ್ರೊಸೆಸರ್‌ಗಳು ಸ್ಪಂದನಾತ್ಮಕ, ಸುರಕ್ಷಿತ ಮತ್ತು ಅತ್ಯುತ್ತಮ ಪ್ರದರ್ಶನ ನೀಡಲಿದೆ. 4ನೇ ಜನರೇಷನ್ ಪ್ರೊಸೆಸರ್ ಮೂಲಕ ಕೊಡಮಾಡಿರುವ ಹೊಸ ಆಲ್ಟ್ರಾಬುಕ್ ಹಾಗೂ ಟು ಇನ್ ವನ್ ಸಾಧನಗಳು ಆಧುನಿಕತೆಯ ಮುಖಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.