ಬರಲಿದೆ ಮೈಕ್ರೋಸಾಫ್ಟ್‌ನಿಂದ ಸ್ಮಾರ್ಟ್‌ವಾಚ್ ಸ್ಮಾರ್ಟ್ ಲೋಕಕ್ಕೆ ಇದೀಗ ಹೊಸ ಸ್ಮಾರ್ಟ್‌ವಾಚ್ ಪ್ರವೇಶಿಸಲು ಸಿದ್ಧವಾಗಿದೆ. ಶೀಘ್ರದಲ್ಲೇ ಮೈಕ್ರೋಸಾಫ್ಟ್ ಸ್ಮಾರ್ಟ್‌ವಾಚ್‌ನ್ನು.... ಸ್ಮಾರ್ಟ್ ಲೋಕಕ್ಕೆ ಇದೀಗ ಹೊಸ ಸ್ಮಾರ್ಟ್‌ವಾಚ್ ಪ್ರವೇಶಿಸಲು ಸಿದ್ಧವಾಗಿದೆ. ಶೀಘ್ರದಲ್ಲೇ ಮೈಕ್ರೋಸಾಫ್ಟ್ ಸ್ಮಾರ್ಟ್‌ವಾಚ್‌ನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಹೊಸ ಗ್ಯಾಜೆಟ್‌ನ ಆಗಮನಕ್ಕೆ ಜನ ಕಾಯುತ್ತಿದ್ದಾರೆ. ಬಲ್ಲಮೂಲಗಳ ಪ್ರಕಾರ ಮುಂದಿನ ಕೆಲವೇ ವಾರಗಳಲ್ಲಿ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ತಲುಪಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಹಾರ್ಟ್ ರೇಟ್ ಮಾನಿಟರ್ ಕೂಡಾ ಇದೆ. ಇದು ಆ್ಯಪಲ್ ಐಒಎಸ್ ಮತ್ತು ಗೂಗಲ್ ಆ್ಯಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯವೆಸಗಲಿದೆ. ರಜಾಕಾಲದ ಶಾಪಿಂಗ್ ವೇಳೆಯಲ್ಲಿ ಈ ಗ್ಯಾಜೆಟ್ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುವ ಡಿವೈಸ್ ಸ್ಯಾಮ್‌ಸಂಗ್ ಕಂಪನಿಯ ಗಿಯರ್ ಫಿಟ್‌ನಂತೆ ಹೋಲುತ್ತಿದ್ದು , ಕಲರ್ ಟಚ್ ಸ್ಕ್ರೀನ್ ಇರುವ ಸ್ಟೈಲಿಷ್ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.