ಆ್ಯಪಲ್‌ನಿಂದ ಇನ್ನೂ 3 ಮಾದರಿ ಐಫೋನ್? ಆ್ಯಪಲ್ ಕಂಪನಿ ಮೂರು ಮಾದರಿಯ ಐಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ನವದೆಹಲಿ: ಗ್ಯಾಜೆಟ್ ಲೋಕದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದು ಈಗಾಗಲೇ ಸೂಚನೆಗಳು ಲಭಿಸಿವೆ. ಅದಕ್ಕೆ ಪೂರಕವಾಗಿ ಆ್ಯಪಲ್ ಕಂಪನಿ ಮೂರು ಮಾದರಿಯ ಐಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಈಗಾಗಲೇ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಅದಕ್ಕಾಗಿ ಕಂಪನಿ ಈಗಾಗಲೇ ಸಿದ್ಧತೆ ಆರಂಭಿಸಿದೆ ಎಂದು ಹೇಳಲಾಗಿದೆ. ಹೊಸ ಐಫೋನ್ 6 ಕಳೆದ ವರ್ಷ ಬಂದ ಐಫೋನ್ 5 ನಂತೆಯೇ ಇರಲಿದೆ. ಬಾಗಿದ ಮಾದರಿ, ಹೆಚ್ಚು ಶಕ್ತಿಯುತವಾಗಿರುವ ಪ್ರೊಸೆಸರ್ ಅಂದರೆ ವಿಶೇಷವಾಗಿ ಸ್ಯಾಮ್‌ಸಂಗ್ ಕಳೆದ ವರ್ಷ ಅಭಿವೃದ್ಧಿ ಪಡಿಸಿದ ಎ9 ಚಿಪ್‌ನಂತೆ ಇರಲಿದೆಯಂತೆ. ಇದರ ಜತೆಗೆ 12.9 ಇಂಚಿನ ಸ್ಕ್ರೀನ್ ಇರುವ ಐಪಾಡ್ ಅನ್ನು ಸಂಸ್ಥೆ ಹೊರತರಲಿದೆ. ಹೀಗಾಗಿ ಆ್ಯಪಲ್ ಕಂಪನಿ ಐಪಾಡ್ ಕ್ಷೇತ್ರದಲ್ಲಿ ತಾನೇ ಕಿಂಗ್ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಮಾದರಿಯ ಐಪಾಡ್ ಅನ್ನು ಬಿಡುಗಡೆ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.