ಬಯೋನಿಕ್ ಮ್ಯಾನ್ ಪ್ರದರ್ಶನ ರಜನಿಕಾಂತ್ ಅವರ ರೋಬೋ ಚಿತ್ರದ 'ಚಿಟ್ಟಿ'ಯನ್ನೇ ಹೋಲುವ ಬಯೋನಿಕ್ ಮ್ಯಾನ್‌ನನ್ನು ವಾಷಿಂಗ್ಟನ್‌ನಲ್ಲಿ... ವಾಷಿಂಗ್ಟನ್: ರಜನಿಕಾಂತ್ ಅವರ ರೋಬೋ ಚಿತ್ರದ 'ಚಿಟ್ಟಿ'ಯನ್ನೇ ಹೋಲುವ ಬಯೋನಿಕ್ ಮ್ಯಾನ್‌ನನ್ನು ವಾಷಿಂಗ್ಟನ್‌ನಲ್ಲಿ ಶುಕ್ರವಾರ ಪ್ರದರ್ಶಿಸಲಾಯಿತು. ಲಂಡನ್‌ನ ಶ್ಯಾಡೋ ರೊಬೋಟ್ ಕಂಪನಿ ನಿರ್ಮಿಸಿದ ಈ ರೊಬೋಟ್ ಅನ್ನು ಸ್ಮಿತ್‌ಸೋನಿಯನ್ಸ್ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಸಿಂಥೆಟಿಕ್ ಅಂಗಾಂಗಗಳನ್ನು ಹೊಂದಿರುವ ಈ ಬಯೋನಿಕ್ ಮ್ಯಾನ್ ಮನುಷ್ಯರಂತೆ ಮಾತನಾಡುವ ಹಾಗೂ ನಡೆದಾಡುವ ಸಾಮರ್ಥ್ಯ ಹೊಂದಿದೆ. 6 ಅಡಿ ಎತ್ತರ, 77 ಕೆ.ಜಿ. ತೂಕದ ಈ ರೊಬೋಟ್ ಅನ್ನು ಬಯೋವುಡಿಕಲ್ ಆವಿಷ್ಕಾರಿಗಳಿಂದ ಸಾಲವಾಗಿ ಪಡೆದ 28 ಕೃತಕ ದೇಹಭಾಗಗಳಿಂದ ನಿರ್ಮಿಸಲಾಗಿದೆ. ಇವುಗಳಲ್ಲಿ ನರವ್ಯವಸ್ಥೆ, ಶ್ವಾಸಕೋಶಗಳು ಕೂಡ ಇವೆ. ಈ ರೊಬೋಟ್ ಚಲನೆಯಿಲ್ಲದ ಮುಖ ಹಾಗೂ ಕೃತಕ ಚರ್ಮವನ್ನು ಹೊಂದಿದೆ. ಇದನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ಕೈಕಾಲು ಚಲನೆಗೆ ಬ್ಲೂಟೂತ್ ಅನ್ನು ಬಳಸಲಾಗುತ್ತದೆ.