ರು. 7,499ಕ್ಕೆ ಎಲ್‌ಇಡಿ ಟಿವಿ! ಇಂಟೆಕ್ಸ್ ಕಂಪನಿ ಕೇವಲ ಅತ್ಯಂತ ಕಡಿಮೆ ಬೆಲೆಯ ಎಲ್‌ಇಡಿ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಎಲ್‌ಇಡಿ ಟಿವಿ ಕ್ಷೇತ್ರದಲ್ಲಿ ಪೈಪೋಟಿಗೆ ಕಿಚ್ಚುಹಚ್ಚಿದೆ. ಇಂಟೆಕ್ಸ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿರುವುದು ಅತ್ಯಂತ ಸಣ್ಣ ಗಾತ್ರ ಎಲ್‌ಇಡಿ ಟಿವಿಗಳನ್ನು. 16 ಇಂಚಿನಿಂದ 23 ಇಂಚಿನ ಎಲ್‌ಇಡಿ ಟಿವಿಗಳು 7,499ರಿಂದ 12,000 ದರದಲ್ಲಿ ಲಭ್ಯವಿದೆ. ಗಾತ್ರದಲ್ಲಿ ದೊಡ್ಡದಲ್ಲದಿದ್ದರೂ ದರದಿಂದಾಗಿ ಇವು ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ. ಎಚ್‌ಡಿ ಸ್ಕ್ರೀನ್‌ಗಳಾಗಿದ್ದು, ಯುಎಸ್‌ಬಿಯಿಂದ ನೇರವಾಗಿ ವೀಡಿಯೋ ಪ್ಲೇ ಮಾಡುವ ಸಾಮರ್ಥ್ಯ ಹೊಂದಿವೆ. ಕಣ್ಣಿನ ಸುರಕ್ಷೆಗಾಗಿ ಟಿ-ಮ್ಯಾಟ್ರಿಕ್ಸ್ ತಂತ್ರಜ್ಞಾನ ಹೊಂದಿವೆ ಎಂದು ಕಂಪನಿ ಹೇಳಿದೆ.