400 ವರ್ಷಗಳ ಹಿಂದೆಯೇ ವಾಚ್ ಇತ್ತು ಗೊತ್ತಾ? ಹ್ಞಾಂ, ನಿಮ್ಗೆ ಗೊತ್ತಾ? 400 ವರ್ಷಗಳ ಹಿಂದೆಯೇ ನಾವು ಕೈಗೆ ಕಟ್ಟುವ ವಾಚ್ ಇತ್ತು! ಇದಕ್ಕೊಂದು ಸಾಕ್ಷಿ ಸಿಕ್ಕಿದೆ. ಭೂಉತ್ಖನನ ಶಾಸ್ತ್ರಜ್ಞರ ಪ್ರಕಾರ, ಚೀನಾದ ಹಳೆಯ ಸಮಾಧಿಯಲ್ಲಿ ಈ ವಾಚ್ ಸಿಕ್ಕಿದೆ. ಇದು 100 ವರ್ಷಗಳ ಹಳೆಯ ಸ್ವಿಸ್ ವಾಚ್ ಇರಬೇಕು ಎಂಬುದು ಅವರ ವಾದವಾಗಿತ್ತು. ಅಧ್ಯಯನ ನಡೆಸಿದ ಬಳಿಕವಷ್ಟೇ ಅದು 400 ವರ್ಷಗಳಷ್ಟು ಹಳೆಯದ್ದು ಎಂಬುದು ಗೊತ್ತಾಗಿದ್ದು. ದಕ್ಷಿಣ ಚೀನಾದ ಶಾಂಘೈನ ಪುರಾತನ ಸಮಾಧಿಯಲ್ಲಿ ಇದು ಸಿಕ್ಕಿದೆ. ಈ ವಾಚ್ ಬೆಳಗ್ಗೆ 10.06 ನಿಮಿಷಕ್ಕೆ ನಿಂತು ಹೋಗಿತ್ತು. ಇದು ಮಿಂಗ್ ರಾಜವಂಶಸ್ಥರ ಆಳ್ವಿಕೆಯ ಕಾಲದಲ್ಲಿ ತಯಾರಿಸಿದ್ದಾಗಿರಬೇಕು ಎಂದಿರುವ ಅವರು, ಅವರು ಚೀನಾವನ್ನು 1368ರಿಂದ 1644ರ ವರೆಗೆ ಆಳಿದ್ದರು.