ಸ್ಯಾಮ್‌ಸಂಗ್ ಕರ್ವ್ ಡಿಸ್‌ಪ್ಲೇ ಮೊಬೈಲ್ ಸ್ಕ್ರೀನ್‌ನಲ್ಲಿ ಸ್ವೈಪ್, ವಾಟರ್‌ಪ್ರೂಫ್, ಮಿರರ್ ಸ್ಕ್ರೀನ್ ಎಲ್ಲ ಬಂದ ಮೇಲೂ ಬೇರಿನ್ನೇನೋ ಕ್ರಾಂತಿಗೆ ಕಂಪನಿಗಳು ಹಾತೊರೆಯುತ್ತಲೇ ಇವೆ. ಅದರಲ್ಲೂ ಸ್ಯಾಮ್‌ಸಂಗ್ ಈ ವಿಚಾರದಲ್ಲಿ ತುಂಬಾ ಸ್ಪೀಡಿದೆ. ಈಗದು ಕರ್ವ್ ಡಿಸ್‌ಪ್ಲೇ ಆವಿಷ್ಕಾರಕ್ಕೆ ಮುಂದಾಗಿದೆ. ಇದೊಂದು ಪುಟ್ಟ ಡೈರಿ ಥರ ಇರುತ್ತೆ ಅಂತ ಕಂಪನಿ ಹೇಳಿಕೊಂಡಿದೆ. ಅಕ್ಟೋಬರ್‌ನಲ್ಲಿ ಈ ಪೀಸ್‌ಗಳನ್ನು ಮಾರುಕಟ್ಟೆಗೆ ಬಿಡಲು ನಿರ್ಧರಿಸಿದೆ. ಆದರೆ, ಎಂದಿನಂತೆ ಇದನ್ನೂ ತವರು ನೆಲ ದಕ್ಷಿಣ ಕೊರಿಯಾದಲ್ಲೇ ಪ್ರಯೋಗಿಸಲು ಅದು ನಿರ್ಧರಿಸಿದೆ. ಕಾದು ನೋಡೋಣ, ಹೇಗಿರಬಹುದು ಅದು?