ಪ್ರಾಣಿಗಳ ಆಘ್ರಾಣ ಶಕ್ತಿ ಪ್ರಾಣಿಗಳು ತಮ್ಮ ಜೊತೆಗಾರರನ್ನು ಹೇಗೆ ಗುರುತಿಸುತ್ತವೆ ಗೊತ್ತಾ? ಇದು ತೀರಾ ಇಂಟೆರೆಸ್ಟಿಂಗ್. ಮನುಷ್ಯರೇ ಕೆಲವೊಮ್ಮೆ ಅವಳಿ ಜವಳಿ... ಪ್ರಾಣಿಗಳು ತಮ್ಮ ಜೊತೆಗಾರರನ್ನು ಹೇಗೆ ಗುರುತಿಸುತ್ತವೆ ಗೊತ್ತಾ? ಇದು ತೀರಾ ಇಂಟೆರೆಸ್ಟಿಂಗ್. ಮನುಷ್ಯರೇ ಕೆಲವೊಮ್ಮೆ ಅವಳಿ ಜವಳಿ ಮಕ್ಕಳಿದ್ದಾಗ ಇಬ್ಬರಲ್ಲಿ ಯಾರು ಎಂಬುದನ್ನು ಹುಡುಕುವುದಕ್ಕೆ ಗೊಂದಲ ಏರ್ಪಡುತ್ತದೆ. ಅಂಥದ್ದರಲ್ಲಿ ಪ್ರಾಣಿಗಳೆಲ್ಲಾ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ. ಆಗ ಯಾವುದು ಅಂತ ಗುರುತು ಹಿಡಿಯೋದು? ಇಂಥ ಗೊಂದಲ ಪ್ರಾಣಿಗಳಿಗೂ ಹುಟ್ಟುವುದಿಲ್ಲವೇ? ಹಾಗಾದರೆ, ಅವು ತಮ್ಮ ಸಂಗಾತಿಯನ್ನು ಹೇಗೆ ಹುಡುಕುತ್ತವೆ? ಹ್ಞಾಂ, ಕೇಳಿ... ಅವು ಸಂಗಾತಿ, ಸಹೋದರ- ಸಹೋದರಿಯರನ್ನು ಗುರುತಿಸುವುದು ವಾಸನೆಯ ಮೂಲಕ. ಅಲ್ಲದೆ, ಸಂಗಾತಿಯಾಗುವುದಕ್ಕೆ ಯಾರು ಲಾಯಕ್ಕು ಎಂಬ ಬಗ್ಗೆಯೂ ಅವು ಈ ಮೂಲಕವೇ ಗುರುತಿಸಿಕೊಳ್ಳುತ್ತವೆ ಎಂದು ಸಂಶೋಧನೆಯೊಂದು ತಿಳಿಸುತ್ತದೆ.