ಕಾಣ್ತಿದೆ ಬೆಲ್ಟು! ಭೂಮಿಯ ಸುತ್ತ ಮತ್ತೊಂದು ವ್ಯಾನ್ ಅಲೆನ್ ಬೆಲ್ಟ್ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದುವರೆಗೆ ಭೂಮಿಯ ಸುತ್ತ ಕೇವಲ ಎರಡೇ ಬೆಲ್ಟ್‌ಗಳಿವೆ ಎಂದು ಹೇಳಲಾಗಿತ್ತು. ಇವೆರಡನ್ನು 1958ರಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಇದೀಗ ಮೂರನೇ ಬೆಲ್ಟ್ ಕೂಡ ಇದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಈ ಬೆಲ್ಟು ಭೂ ವಾತಾವರಣ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಮಾನವರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆಯೂ ಸಂಶೋಧನೆ ಶುರುವಾಗಿದೆ. ವಿಜ್ಞಾನಿಗಳು ಸಾಮಾನ್ಯವಾಗಿ ಇವನ್ನು 'ಕಿಲ್ಲರ್ ಇಲೆಕ್ಟ್ರಾನ್‌ಗಳು' ಎಂದು ಕರೆಯುತ್ತಾರೆ. ಇವು ಭೂಮಿಯ ಸುತ್ತ ಇದ್ದು ಮಿಠಾಯಿ ಆಕಾರದಲ್ಲಿರುತ್ತವೆ. ನಾಸಾದ ಬಾಹ್ಯಾಕಾಶ ವಿಭಾಗ ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದು, ಹವಾಮಾನದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ರೇಡಿಯೇಶನ್ ಬೆಲ್ಟ್ ಬಗ್ಗೆ ಅಧ್ಯಯನ ಪೂರ್ಣವಾದ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.