ಟ್ವಿಟರ್‍ನಲ್ಲಿ ತಾಂತ್ರಿಕ ಸಮಸ್ಯೆ ಟ್ವಿಟರ್‍ನಲ್ಲಿ ಮತ್ತೊಮ್ಮ ಸಮಸ್ಯೆ ಕಾಣಿಸಿಕೊಂಡಿದೆ. ಲಾಗಿನ್ ಆಗುವ ವೇಳೆ ಎದುರಾಗಿರುವ ಸಮಸ್ಯೆಯಿಂದಾಗಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳ ಬಳಕೆದಾರರಿಗೆ ಸಮಸ್ಯೆಯಾಗಿದೆ... ನವದೆಹಲಿ: ಟ್ವಿಟರ್‍ನಲ್ಲಿ ಮತ್ತೊಮ್ಮ ಸಮಸ್ಯೆ ಕಾಣಿಸಿಕೊಂಡಿದೆ. ಲಾಗಿನ್ ಆಗುವ ವೇಳೆ ಎದುರಾಗಿರುವ ಸಮಸ್ಯೆಯಿಂದಾಗಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳ ಬಳಕೆದಾರರಿಗೆ ಸಮಸ್ಯೆಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಂಸ್ಥೆ ``ಲಾಗಿನ್ ಆಗುವ ವೇಳೆ ಜನರು ಇತ್ತೀಚೆಗೆ ಸಮಸ್ಯೆ ಎದುರಿಸಿರುವ ಸಾಧ್ಯತೆ ಇದೆ. ಅದನ್ನು ಕೂಡಲೇ ಬಗೆಹರಿಸಲಾಗುತ್ತದೆ'' ಎಂದು ಹೇಳಿಕೊಂಡಿದೆ. ಬಳಕೆದಾರರು ಲಾಗಿನ್ ಆಗಲು ಹೊರಟಾಗ ಪರದೆಯ ಮೇಲೆ ``ತಾಂತ್ರಿಕ ಸಮಸ್ಯೆಎದುರಾಗಿದೆ. ಕೂಡಲೇ ಸಹಜಸ್ಥಿತಿಗೆ ತರಲಾಗುವುದು,'' ಎಂಬ ಸಂದೇಶ ಮೂಡುತ್ತಿತ್ತು. ಜ.15ರಂದು ಟ್ವಿಟರ್‍ನಲ್ಲಿ ಇದೇ ರೀತಿಯ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಕಳೆದ 24 ಗಂಟೆಗಳಲ್ಲಿ ಟ್ವಿಟರ್‍ನಲ್ಲಿ 3 ಬಾರಿ ಸಮಸ್ಯೆ ಕಾಣಿಸಿಕೊಂಡಿದೆ.