ಚಾಕೊಲೇಟ್ ಫ್ಲೇವರ್ ಆಂಡ್ರಾಯ್ಡ್ ಕಂಪನಿಯು ಕಪ್ ಕೇಕ್ ಹೆಸರಿನ ಆಪರೇಟಿಂಗ್ ಸಿಸ್ಟಮ್ ಮೂಲಕ ಜೆಲ್ಲಿಬೀನ್‌ವರೆಗೆ ಮಿಲಿಯನ್‌ಗಟ್ಟಲೇ... ಆಂಡ್ರಾಯ್ಡ್ ಕಂಪನಿಯು ಕಪ್ ಕೇಕ್ ಹೆಸರಿನ ಆಪರೇಟಿಂಗ್ ಸಿಸ್ಟಮ್ ಮೂಲಕ ಜೆಲ್ಲಿಬೀನ್‌ವರೆಗೆ ಮಿಲಿಯನ್‌ಗಟ್ಟಲೇ ಗ್ರಾಹಕರಿಗೆ ಚಾಕೊಲೇಟ್ ಫ್ಲೇವರ್ ಪಸರಿಸಿದೆ. ಪ್ರತಿ ಓಎಸ್‌ನಲ್ಲೂ ಬದಲಾವಣೆಯನ್ನು ತರುತ್ತಿರುವ ಆಂಡ್ರಾಯ್ಡ್, ಇದೇ ಮೇ 15ರಂದು ತನ್ನ ನೂತನ ಓಎಸ್ 'ಕೀ ಲೈಮ್ ಪೈ' ಅನ್ನು ಬಿಡುಗಡೆಗೊಳಿಸುತ್ತಿದೆ... 21ನೇ ಶತಮಾನದ ಪ್ರಖ್ಯಾತ ಚಾಕೊಲೇಟ್ ಬ್ರ್ಯಾಂಡ್ ಅನ್ನು ಸವಿಯಬಹುದು. ಆದರೆ, ತಿನ್ನಲು ಸಾಧ್ಯವಿಲ್ಲ! ವಿಶ್ವದ ಪ್ರತಿಯೊಬ್ಬ ಯುವಕರ ಬಾಯಲ್ಲೂ ಈ ಚಾಕೊಲೇಟ್ ಹರಿದಾಡುತ್ತದೆ. ನಾವು ಹೇಳಹೊರಟಿರುವುದು ಮೊಬೈಲ್ ಚಾಕೊಲೇಟ್ ಬಗ್ಗೆ, ಅಂದರೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ. ಗೂಗಲ್ ಮಾಲೀಕತ್ವದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೊದಲಿನಿಂದಲೂ ಚಾಕೊಲೇಟಿನ ಹೆಸರಿನಲ್ಲೇ ಸುಧಾರಿತ ಆಪರೇಟಿಂಗ್ ಸಿಸ್ಟಮ್‌ಗಳನ್ನು ಹೊರತರುತ್ತಿದ್ದು, ನಿತ್ಯ 10 ಲಕ್ಷಕ್ಕೂ ಅಧಿಕ ಮಂದಿ ಈ ಆಂಡ್ರಾಯ್ಡ್ ಚಾಕೊಲೇಟ್ ತಿನ್ನುತ್ತಿದ್ದಾರೆ! ಈ ಚಾಕೊಲೇಟ್ ಮೂಲಕ ಅಂದರೆ ಇದರ ಗೂಗಲ್ ಪ್ಲೇ ಮಾರ್ಕೇಟ್ ಮೂಲಕ ಪ್ರತಿ ತಿಂಗಳು 150 ಕೋಟಿಗೂ ಅಧಿಕ ಅಪ್ಲಿಕೇಷನ್‌ಗಳು ಡೌನ್‌ಲೋಡ್ ಆಗುತ್ತಿವೆ! ಆಂಡ್ರಾಯ್ಡ್ ಕಂಪನಿಯು ಕಪ್ ಕೇಕ್ ಹೆಸರಿನ ಆಪರೇಟಿಂಗ್ ಸಿಸ್ಟಮ್ ಮೂಲಕ ಜೆಲ್ಲಿಬೀನ್‌ವರೆಗೆ ಮಿಲಿಯನ್‌ಗಟ್ಟಲೇ ಗ್ರಾಹಕರಿಗೆ ಚಾಕೊಲೇಟ್ ಫ್ಲೇವರ್ ಪಸರಿಸಿದೆ. ಪ್ರತಿ ಓಎಸ್‌ನಲ್ಲೂ ಬದಲಾವಣೆಯನ್ನು ತರುತ್ತಿರುವ ಆಂಡ್ರಾಯ್ಡ್, ಇದೇ ಮೇ 15ರಂದು ತನ್ನ ನೂತನ ಓಎಸ್ 'ಕೀ ಲೈಮ್ ಪೈ' ಅನ್ನು ಬಿಡುಗಡೆಗೊಳಿಸುತ್ತಿದೆ. ಕೇವಲ ಅರ್ಧ ದಶಕದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ಆಂಡ್ರಾಯ್ಡ್ ಕಂಪನಿಯನ್ನು ಗೂಗಲ್ ಸಂಸ್ಥೆ ಖರೀದಿಸಿದ್ದು ಹಳೆಯ ವಿಚಾರ. ಆದ್ದರಿಂದ 15ರಂದು ನಡೆಯುತ್ತಿರುವ ಅಂತಾರಾಷ್ಟ್ರೀಯ ಗೂಗಲ್ ಸಮ್ಮಿಟ್‌ನಲ್ಲಿ ಮತ್ತಷ್ಟು ರೋಮಾಂಚನಗಳ ನಿರೀಕ್ಷೆಯಲ್ಲಿ ಮೊಬೈಲ್ ಜಗತ್ತಿದೆ. ಚಾಕೊಲೇಟ್ ಫ್ಲೇವರ್‌ನ ಇತಿಹಾಸ ಆ್ಯಂಡ್ರಾಯ್ಡ್ ಕಂಪನಿಯು ಗೂಗಲ್ ಸಂಸ್ಥೆಯ ಆರ್ಥಿಕ ಸಹಾಯದಿಂದ 21ನೇ ಶತಮಾನದ ಪ್ರಾರಂಭದಿಂದಲೇ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನ ಸಂಶೋಧನೆಯಲ್ಲಿ ತೊಡಗಿತ್ತು. 2007ರಲ್ಲಿ ಬೇಟಾ ಮಾದರಿ ಹೊರಬಂದರೂ ಯಾವುದೇ ಮೊಬೈಲ್ ಮೂಲಕ ಮಾರುಕಟ್ಟೆಗೆ ಬರಲಿಲ್ಲ. ಆದರೆ ಸೆ.28, 2008ರಲ್ಲಿ ಎಚ್‌ಟಿಸಿ ಡ್ರೀಮ್ ಎಂಬ ಮೊಬೈಲ್ ಮೂಲಕ ಆಂಡ್ರಾಯ್ಡ್ 1.0 ಓಎಸ್ ಮಾರುಕಟ್ಟೆಗೆ ಬಂತು. ಈ ಮೂಲಕ ಎಚ್‌ಟಿಸಿ ಹಾಗೂ ಆಂಡ್ರಾಯ್ಡ್ ಕಂಪನಿಯು ಸ್ಮಾರ್ಟ್‌ಫೋನ್ ದುನಿಯಾಕ್ಕೆ ಭರ್ಜರಿ ಎಂಟ್ರಿ ಕೊಟ್ಟವು. ಇದಾದ ಬಳಿಕ ಸಂಸ್ಥೆಯು ಸುಧಾರಿತ ಆಪರೇಟಿಂಗ್ ಸಿಸ್ಟಮ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಸಾಗಿತು. ಮೊದಲ ಎರಡು ಮಾದರಿಗಳಿಗೆ ಯಾವುದೇ ಹೆಸರಿಟ್ಟಿರಲಿಲ್ಲ. ಆಂಡ್ರಾಯ್ಡ್ ಎಂಬ ಶಬ್ದಕ್ಕೆ ಯಾವುದೇ ಚಾಕೊಲೇಟ್‌ನ ಹೆಸರು ಸೇರಿರದಿದ್ದರೂ ಮಾನವನಂತಿರುವ ರೋಬೋಟ್ ಎಂದು ಹೇಳಲಾಗುತ್ತದೆ. ಆದರೆ ಆ ಬಳಿಕ ಸಂಸ್ಥೆಯು ತನ್ನೆಲ್ಲ ಓಎಸ್‌ಗಳಿಗೆ ಚಾಕೊಲೇಟ್‌ನ ಹೆಸರಿಡಲು ಮುಂದಾಯಿತು. ಇಂದಿನವರೆಗೆ ಆಂಡ್ರಾಯ್ಡ್ 17 ಸುಧಾರಿತ ಓಎಸ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಅವು ಮಾರುಕಟ್ಟೆಗೆ ಬರುತ್ತಿವೆ. ಇದರಲ್ಲಿ ಮೊದಲ 2 ಮಾದರಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಚಾಕೊಲೇಟ್ ಹೆಸರನಲ್ಲಿರುವುದೇ ವಿಶೇಷ. ಒಟ್ಟಿನಲ್ಲಿ ಇಂದಿನವರೆಗೆ 8 ಚಾಕೊಲೇಟ್‌ಗಳು ಖಾಲಿಯಾಗಿ 9ನೇ ಚಾಕೊಲೇಟ್‌ನ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ. ಇವತ್ತಿನವರೆಗೆ ಕಪ್‌ಕೇಕ್, ಡೋನಟ್, ಎಕ್ಲೇರ್, ಫ್ರೋಯೋ, ಜಿಂಜರ್‌ಬ್ರೆಡ್, ಹನಿಕಾಂಬ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಹಾಗೂ ಜೆಲ್ಲಿಬೀನ್ ಪ್ಲೇವರ್‌ಗಳನ್ನು ಕೋಟ್ಯಾಂತರ ಗ್ರಾಹಕರು ಸವಿದಿದ್ದಾರೆ. ಇದರಲ್ಲಿ ಜಿಂಜರ್‌ಬ್ರೆಡ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಹಾಗೂ ಜೆಲ್ಲಿಬೀನ್ ಓಎಸ್‌ಗಳು ಜನಮನ್ನಣೆ ಗಿಟ್ಟಿಸಿವೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬರುವವರೆಗೂ ನೋಕಿಯಾದ ಸಿಂಬಿಯಾನ್ ಓಎಸ್ ಮಾರುಕಟ್ಟೆಯನ್ನು ಆಳುತ್ತಿತ್ತು. ಆದರೆ ಮಾರುಕಟ್ಟೆಗೆ ಆಂಡ್ರಾಯ್ಡ್ ದಾಳಿಯಿಟ್ಟ ಕೇವಲ ಎರಡೇ ವರ್ಷದಲ್ಲಿ ನಂ.1 ಪಟ್ಟಕ್ಕೇರಿತು. ಅಂದಿನಿಂದಲೇ ನೋಕಿಯಾ ಕಂಪನಿಯ ಪತನವೂ ಪ್ರಾರಂಭವಾಯಿತು. ಇಂದು ಮಾರುಕಟ್ಟೆಯಲ್ಲಿ ಸುಮಾರು 75 ಕೋಟಿ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಡಿವೈಸ್‌ಗಳಿವೆ. ಕೀ ಲೈಮ್ ಪೈನಲ್ಲಿ ಏನಿರಬಹುದು? ಜೆಲ್ಲಿ ಬೀನ್ ಓಎಸ್‌ನಲ್ಲಿಯೇ ಮಲ್ಟಿ ಸ್ಕ್ರೀನ್ ಅವಕಾಶ ಮಾಡಲಾಗಿತ್ತು. ಇದನ್ನು ಇನ್ನಷ್ಟು ಸುಧಾರಿಸಿ ಡಿವೈಸ್‌ನ ವೇಗವರ್ಧನೆಗೆ ಆಂಡ್ರಾಯ್ಡ್ 5.0 ಕೀ ಲೈಮ್ ಪೈ ಸಹಾಯವಾಗಲಿದೆ ಎಂದು ಗೂಗಲ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇದರ ಜತೆಗೆ ಗೂಗಲ್‌ನ ಹೊಸ ಆವಿಷ್ಕಾರವಾದ ಗೂಗಲ್ ಬಬಲ್ ಎನ್ನುವ ಚಾಟ್ ಅಥವಾ ಮೆಸೇಂಜರ್ ಅಪ್ಲಿಕೇಷನ್ ಕೂಡ ಬರುತ್ತಿದೆ. ಇದರೊಟ್ಟಿಗೆ ಸಾಮಾಜಿಕ ತಾಣಗಳ ಬಳಕೆಯನ್ನು ಇನ್ನಷ್ಟು ಸಲೀಸು ಮಾಡಲಾಗಿದೆ. ವಿಡಿಯೋ ಮತ್ತು ಆಡಿಯೋ ಚಾಟ್‌ಗೆ ಹೇಳಿಮಾಡಿಸಿದಂತೆ ಓಎಸ್ ರೂಪಿಸಲಾಗುತ್ತಿದೆ. ಮೊಬೈಲ್ ಓಎಸ್ ಮಟ್ಟಿಗೆ ಜೆಲ್ಲಿ ಬೀನ್‌ನ್ನು ಪರಿಪೂರ್ಣ ಎಂದು ತಜ್ಞರು ಹೇಳಿಯಾಗಿದೆ. ಆದರೆ ಅದರಲ್ಲಿನ ಕೆಲ ದೋಷಗಳನ್ನು ಗುರುತಿಸಿ ಆ್ಯಂಡ್ರಾಯ್ಡ್ ಕಂಪನಿಯು ಹೊಸ ಅವತರಣಿಕೆ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಎಚ್‌ಟಿಸಿ, ಸೋನಿ ಹಾಗೂ ಸ್ಯಾಮ್‌ಸಂಗ್‌ನ ಕೆಲ ಮೊಬೈಲ್‌ಗಳು ಕೀ ಲೈಮ್ ಪೈ ಓಎಸ್ ಮೂಲಕ ಮಾರುಕಟ್ಟೆಗೆ ಬರಲು ಸಜ್ಜಾಗಿವೆ ಎಂದು ಗೂಗಲ್ ಕಂಪನಿಯೇ ಹೇಳಿಕೊಂಡಿದೆ. ಆಂಡ್ರಾಯ್ಡ್‌ನ ಕೆಲ ವಿಶೇಷ