2050ರ ವೇಳೆಗೆ ಬರಲಿದೆ ಹಾರುವ ಕಾರು! ಹ್ಯಾರಿ ಪೋಟರ್ ಆ್ಯಂಡ್ ದ ಛೇಂಬರ್ ಆಫ್.. ಹ್ಯಾರಿ ಪೋಟರ್ ಆ್ಯಂಡ್ ದ ಛೇಂಬರ್ ಆಫ್ ಸೀಕ್ರೆಟ್ಸ್ ಪುಸ್ತಕ ಹಾಗು ಸಿನಿಮಾದಲ್ಲಿ ಮಿ. ವೇಸ್ಲಿ ಹೊಂದಿರುವ ಹಾರುವ ಕಾರು ಕಲ್ಪನೆ ಮಾತ್ರ ಅಲ್ಲ, ಶೀಘ್ರದಲ್ಲೇ ಅದು ವಾಸ್ತವವಾಗಲಿದೆ. ಹೌದು, ಯುರೋಪ್ನ 6 ಇನ್ಸಿಟ್ಯೂಟ್ಗಳು ಮೈಕಾಪ್ಟರ್ ಎಂಬ ಕಾರನ್ನು ತಯಾರಿಸಲು ಮುಂದಾಗಿವೆ. ಟ್ರಾಫಿಕ್ ನಲ್ಲಿನ ಒದ್ದಾಟ ಹಾಗು ಅಪಘಾತವನ್ನು ತಡೆಗಟ್ಟಲು ಹಾರುವ ಕಾರುಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಮೈಕಾಪ್ಟರ್ ಯೋಜನೆಯ ಪ್ರಧಾನ ಸಂಶೋಧಕ ಡಾ.ಹೈರ್ನಿಚ್ ಹೆಚ್ ಬುಲ್ತೋಫ್ ಹೇಳುವಂತೆ ಈ ಕಾರುಗಳು ಆಕಾಶದಲ್ಲಿ ಹಾರಾಡಲಿವೆ. ಇವುಗಳು ಹಾರಾಡುವಂತೆ ಪ್ರತ್ಯೇಕ ದಾರಿಯನ್ನು ನಿರ್ಮಿಸಲಾಗುವುದು. ಇಂಟಲಿಜೆಂಟ್ ಸೆನ್ಸರ್ ಮೂಲಕ ಹಾರಾಡುವಾಗ ಎದುರಾಗುವ ಅಡಚಣೆಗಳನ್ನು ಅರಿಯಲು ಹಾಗು ಸುರಕ್ಷಿತವಾಗಿ ಲ್ಯಾಂಡ್ ಆಗುವಂತಹ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪೈಲೆಟ್ ರಹಿತ ಈ ಕಾರುಗಳಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ನಲ್ಲಿನ ತಂತ್ರಜ್ಞಾನವನ್ನೇ ಬಳಸುವುದಾದರೂ ಮಾನವನಿಗೆ ಸುಲಭವಾಗಿ ಬಳಸಲ್ಪಡುವಂತ ರೀತಿಯಲ್ಲಿ ವಿನ್ಯಾಸ ಗೊಳಿಸಲಾಗುವುದು. ಇಂಥಾ ಕಾರುಗಳನ್ನು ತಯಾರಿಸುವುದು ಸುಲಭ ಅಲ್ಲದೇ ಇದ್ದರೂ, 2050ರ ವೇಳೆಗೆ ಈ ಯೋಜನೆಯ ಪ್ರಕಾರ 2050ರ ವೇಳೆಗೆ 'ಹಾರುವ ಕಾರು' ಯಾಥಾರ್ಥ್ಯವಾಗಲಿದೆ. ಇನ್ಮುಂದೆ ಟ್ರಾಫಿಕ್ನಲ್ಲಿ ಸಿಕ್ಕು ಹಾರ್ನ್ ಹಾಕುತ್ತಾ ಸದ್ದು ಮಾಡುವ ಬದಲು, ಮುಂದೆ ಸಾಗುವುದಕ್ಕೆ ಹಾರುವ ಕಾರು ಖರೀದಿಸಿ 'ಹಾರಿ ಬಿಡಿ' ಎಂದು ಹೇಳುವ ಕಾಲ ಹತ್ತಿರವಾಗುತ್ತಿದೆ.